ತಿರುವನಂತಪುರ: ಕೇಂದ್ರ ಸಂಸ್ಥೆಗಳ ತನಿಖೆಯನ್ನು ಕಾನೂನುಬದ್ಧವಾಗಿ ಎದುರಿಸುತ್ತೇನೆ ಎಂಬ ಮುಖ್ಯಮಂತ್ರಿ ಹೇಳಿಕೆ ಅಪ್ರಬುದ್ದ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಬಿ.ಕಮಾಲ್ ಪಾಷಾ ಹೇಳಿದ್ದಾರೆ. ತನಿಖೆಗೆ ಆಗ್ರಹಿಸಿ ಪತ್ರ ಕಳುಹಿಸಿದ್ದ ಮುಖ್ಯಮಂತ್ರಿ ಈಗ ತಮ್ಮ ನಿಲುವನ್ನು ಬದಲಾಯಿಸಿಕೊಂಡರೂ ಪ್ರಯೋಜನವಿಲ್ಲ ಎಂದವರು ತಿಳಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳಿಗೆ ಎದುರಾಗಿ ಮುಖ್ಯಮಂತ್ರಿಗಳ ಆರೋಪಗಳು ಹೊರಬಿದ್ದ ಬಳಿಕ ನ್ಯಾಯಮೂರ್ತಿ ಕಮಾಲ್ ಪಾಷಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತನಿಖಾ ಸಂಸ್ಥೆಗಳನ್ನು ಕಾನೂನು ರೀತ್ಯಾ ಎದುರಿಸಬಲ್ಲೆ ಎಂದಷ್ಟೇ ಹೇಳಲು ಸಾಧ್ಯ.ಹೊರತು ಕಾನೂನು ಬಾಹಿರವಾಗಿ ತನಿಖಾ ಸಂಸ್ಥೆಗಳನ್ನು ಎದುರಿಸುವ ಪರಿಪಾಠ ಎಂಬುದೊಂದು ಇದೆಯೇ ಎಂದವರು ಪ್ರಶ್ನಿಸಿದರು. ಜೊತೆಗೆ ಸ್ವತಃ ಪ್ರಧಾನಿಗಳಿಗೇ ಮನವಿ ನೀಡಿ ತನಿಖೆಗೆ ಆಗ್ರಹಿಸಿ, ಅವುಗಳು ಇಲ್ಲಿಯವರೆಗೂ ಕರೆಸಿದ ಬಳಿಕ ಆರೋಪಿಸುವುದರಲ್ಲಿ ಯಾವ ಅರ್ಥವತ್ತತೆಯೂ ಇಲ್ಲವೆಮದು ಕಮಾಲ್ ಪಾಷಾ ತಿಳಿಸಿರುವರು.
ಮುಖ್ಯಮಂತ್ರಿಗಳ ಮಾಜೀ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ವಿಜಿಲೆನ್ಸ್ ಇದೀಗ ಆರೋಪಿತನೆಂದು ಖಾತ್ರಿಪಡಿಸಿರುವ ಹೊತ್ತಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಈವರೆಗಿನ ಸಂಶಯಗಳು ದೃಢಗೊಂಡಿರುವುದು ಸಾಬೀತಾಗಿದೆ. ಶಿವಶಂಕರ್ ಅವರ ಅಕ್ರಮ ಚಟುವಟಿಕೆಗಳು ಮುಖ್ಯಮಂತ್ರಿಯವರ ಗಮನಕ್ಕೆ ಬಾರದಿರುವುದು ಖೇದಕರ ಎಂದು ಪಾಷಾ ಅಭಿಪ್ರಾಯ ವ್ಯಕ್ತಪಡಿಸಿರುವರು.
ಕೆಲವೆಡೆ ತನಿಖಾ ಸಂಸ್ಥೆಗಳನ್ನು ಕೇಂದ್ರ ದುರುಪಯೋಗಪಡಿಸುವುದಿದೆ. ಆದರೆ ಕೇರಳದ ಮಟ್ಟಿಗೆ ಈಗ ನಡೆಯುತ್ತಿರುವ ತನಿಖೆಗಳು ಸರಿಯಾದ ಹಳಿಯಲ್ಲೇ ಸಾಗುತ್ತಿದೆ ಎಂದು ಪಾಷಾ ಬೊಟ್ಟುಮಾಡಿರುವರು.