ಗೋಪೇಶ್ವರ್: ಚಳಿಗಾಲ ಹಿನ್ನೆಲೆಯಲ್ಲಿ ಹಿಮಪಾತದ ಕಾರಣ ಹಿಮಾಲಯ ತಪ್ಪಲಿನಲ್ಲಿರುವ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗಿದೆ.
11 ಜ್ಯೋತಿರ್ಲಿಂಗಗಳುಳ್ಳ ಶಿವನ ದೇವಾಲಯವನ್ನು ಸೋಮವಾರ ಬೆಳಗ್ಗೆ 8.30 ಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಾಲಯದ ಗೇಟ್ ಗಳನ್ನು ಮುಚ್ಚಲಾಯಿತು.
ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.
ಹಿಮಾಲಯದ ದೇವಸ್ಥಾನಗಳಾದ ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಚಳಿಗಾಲದಲ್ಲಿ ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುತ್ತದೆ. ಹೀಗಾಗಿ, ದೇವಾಲಯ ಹಿಮಾವೃತವಾಗಲಿದೆ. ಅಲ್ಲದೆ, ಅಲ್ಲಿಗೆ ತೆರಳುವುದು ಕೂಡ ಅಸಾಧ್ಯ. ಏಪ್ರಿಲ್-ಮೇ ತಿಂಗಳ ವೇಳೆಗೆ ಮತ್ತೆ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ.