ಪೆರ್ಲ:ಕರ್ನಾಟಕ ನೊಂದಾಯಿತ ಟ್ಯಾಕ್ಸಿ ಹಾಗೂ ಇತರ ವಾಹನಗಳು ಕೋವಿಡ್ ಮಾನದಂಡಗಳನ್ನು ಪಾಲಿಸದೆ ಕಾಸರಗೋಡು ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸುತ್ತಿರುವ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಿರ್ದೇಶನದಂತೆ ಜಿಲ್ಲೆಯ ಗಡಿಗಳಲ್ಲಿ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬಿಗು ತಪಾಸಣೆ ಆರಂಭಿಸಲಾಗಿದೆ.
ಸ್ವರ್ಗ, ಅಡ್ಕಸ್ಥಳ ಮತ್ತಿತರ ಗಡಿ ಪ್ರದೇಶಗಳಲ್ಲಿ ಶನಿವಾರ
ಕಾಸರಗೋಡು ಆರ್ ಟಿಒ ಎ.ಕೆ.ರಾಧಾಕೃಷ್ಣನ್ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ಎನ್ಫೋಸ್ಮೆರ್ಂಟ್ ಆರ್ ಟಿಒ ಜೋರ್ಸನ್, ಎಎಂವಿಐ ಪ್ರದೀಪ್ ಕುಮಾರ್ ಸಿ.ಎ, ಸುಜಿತ್ ಜೋರ್ಜ್, ಅರುಣ್ ಕುಮಾರ್ ಸಹಕರಿಸಿದರು.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ