ಕಾಸರಗೋಡು: ಮತದಾನದ ದಿನದಂದು ಮತದಾನ ಕೇಂದ್ರಗಳಲ್ಲಿ ಮಾಸ್ಕ್ ಧರಿಸಲು ಚುನಾವಣಾ ಆಯೋಗ ಷರತ್ತು ವಿಧಿಸಿದೆ. ಮಾದರಿ ನೀತಿ ಸಂಹಿತೆಯು ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಚಿಹ್ನೆಗಳನ್ನು ಹೊಂದಿರುವ ಮಾಸ್ಕ್ ಗಳನ್ನು ಪಂಚಾಯತಿ ಬೂತ್ ಗಳ 200 ಮೀಟರ್ ಮತ್ತು ನಗರ ಸಭೆಯ 100 ಮೀಟರ್ ವ್ಯಾಪ್ತಿಯಲ್ಲಿ ಬಳಸುವುದನ್ನು ನಿಷೇಧಿಸುವ ಒಂದು ವಿಶೇಷ ನಿಬಂಧನೆಯನ್ನು ಒಳಗೊಂಡಿದೆ.