ಎಲ್ಲೆಡೆಯ ನಿವೃತ್ತಿ ವೇತನದಾರರಿಗೆ ಮಹತ್ವದ ಮಾಹಿತಿ
'ಸರಕಾರಿ ಅಥವಾ ಸರಕಾರೇತರ ನೌಕರರಿಗೆ ನಿವೃತ್ತಿಯ ನಂತರ ಪ್ರತಿ ತಿಂಗಳಿಗೆ 'ನಿವೃತ್ತಿ ವೇತನ' (ಪೆನ್ಶನ್)ವನ್ನು ಕೊಡಲಾಗುತ್ತದೆ. ಅದಕ್ಕಾಗಿ ಅವರಿಗೆ ಯಾವ ಬ್ಯಾಂಕ್‌ನಿಂದ ನಾವು ನಿವೃತ್ತಿ ವೇತನವನ್ನು ಪಡೆಯುತ್ತೇವೆಯೋ, ಆ ಬ್ಯಾಂಕ್‌ಗೆ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ 'ಜೀವನ ಪ್ರಮಾಣಪತ್ರ'ವನ್ನು ನೀಡಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಮುಂದಿನ ವರ್ಷವಿಡಿ ನಿವೃತ್ತಿ ವೇತನವು ಮುಂದುವರಿಯುತ್ತದೆ. ಈ ಪ್ರಮಾಣಪತ್ರವನ್ನು ನೀಡುವ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಮುಂದೆ ಕೊಡಲಾಗಿದೆ.
೧. ಜೀವನ ಪ್ರಮಾಣಪತ್ರ ಎಲ್ಲಿ ತೆಗೆದುಕೊಳ್ಳಬೇಕು?
೧ ಅ. ಸಂಬಂಧಿತ ಬ್ಯಾಂಕಿನ ಯಾವುದೇ ಶಾಖೆಯಿಂದ ಡಿಜಿಟಲ್ 'ಜೀವನ ಪ್ರಮಾಣಪತ್ರ'ವನ್ನು ನೀಡಬಹುದು !
ಪ್ರಮಾಣಪತ್ರವನ್ನು ನೀಡಲು ಬ್ಯಾಂಕಿನ ಯಾವ ಶಾಖೆಯಲ್ಲಿ ಖಾತೆಯನ್ನು ತೆರೆಯಲಾಗಿದೆಯೋ, ಪ್ರತ್ಯಕ್ಷ ಆ ಶಾಖೆಗೆ ಹೋಗುವ ಆವಶ್ಯಕತೆ ಇಲ್ಲ. ಸದ್ಯ ವಾಸ್ತವ್ಯವಿರುವ ಸ್ಥಳದಲ್ಲಿ ಆ ಬ್ಯಾಂಕಿನ ಯಾವ ಶಾಖೆ ಇದೆಯೋ, ಅಲ್ಲಿ ಮುಂದಿನ ಕಾಗದಪತ್ರಗಳನ್ನು ತೋರಿಸಿ ಡಿಜಿಟಲ್ 'ಜೀವನ ಪ್ರಮಾಣಪತ್ರ'ವನ್ನು ನೀಡಬಹುದು. (ಉದಾ. ಒಬ್ಬರು ನಿವೃತ್ತಿ ವೇತನಕ್ಕಾಗಿ ಶಿವಮೊಗ್ಗದಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ ಮತ್ತು ಸದ್ಯ ಅವರು ದೆಹಲಿಯಲ್ಲಿ ವಾಸ್ತವ್ಯಕ್ಕೆ ಇದ್ದರೆ ದೆಹಲಿಯ ಆ ಬ್ಯಾಂಕಿನ ಶಾಖೆಯಿಂದಲೂ ಆ ಪ್ರಮಾಣಪತ್ರವನ್ನು ನೀಡಬಹುದು.)
೧ ಆ. ಕೆಲವೆಡೆ ಸರಕಾರಿ ಮತ್ತು ಸರಕಾರೇತರ ಸೌಲಭ್ಯಗಳನ್ನು ಒದಗಿಸಲು 'ಕಾಮನ್ ಸರ್ವಿಸ್ ಸೆಂಟರ್ ಆರಂಭಗೊಂಡಿವೆ. ಅಲ್ಲಿ ಹಾಗೂ ಪೊಸ್ಟ್ ಮೂಲಕವೂ ಜೀವನ ಪ್ರಮಾಣಪತ್ರವನ್ನು ನೀಡಬಹುದು. ತಮ್ಮ ಪರಿಸರದಲ್ಲಿರುವ 'ಕಾಮನ್ ಸರ್ವಿಸ್ ಸೆಂಟರ್ಸ್ನ ಮಾಹಿತಿಯು https://locator.csccloud.in ಈ ಜಾಲತಾಣದಲ್ಲಿ ದೊರೆಯುವುದು
೨. ಆವಶ್ಯಕ ಕಾಗದಪತ್ರಗಳು
ಅ. ಆಧಾರ ಕಾರ್ಡ್‌ನ ಮೂಲ ಮತ್ತು ಝೆರಾಕ್ಸ್ ಪ್ರತಿ
ಆ. ನಿವೃತ್ತಿ ವೇತನ ಜಮೆಯಾಗುವ ಖಾತೆಯ ಪಾಸ್‌ಬುಕ್
ಇ. ಪೆನ್ಶನ್ ಪೆಮೆಂಟ್ ಆರ್ಡರ್ (ಪಿ.ಪಿ.ಓ.) ಕ್ರಮಾಂಕ
ಅದರ ನಂತರ ಬ್ಯಾಂಕಿನ ಅಧಿಕಾರಿಯು ನಿವೃತ್ತಿ ವೇತನದಾರರಿಗೆ ಪ್ರಮಾಣಪತ್ರವನ್ನು ನೀಡುವ ಮುಂದಿನ ಪ್ರಕ್ರಿಯೆಯನ್ನು ಮಾಡುವರು.
ಈ. ಬ್ಯಾಂಕಿಗೆ ಹೋಗುವಾಗ ಜೊತೆಗೆ ಆಧಾರ ಕಾರ್ಡಿನ ರಿಜಿಸ್ಟರ್ ಮಾಡಿದ ನಮ್ಮ ಸಂಚಾರವಾಣಿ ತೆಗೆದುಕೊಂಡು ಹೋಗಬೇಕು. ಇದರಿಂದ ಅದಕ್ಕೆ 'ಓ.ಟಿ.ಪಿ.' (ವನ್ ಟೈಮ್ ಪಾಸವರ್ಡ್) ಸಿಗುವುದು ಮತ್ತು ಅದನ್ನು ತಕ್ಷಣ ಬ್ಯಾಂಕಿಗೆ ಕೊಡಬಹುದು.
ಅನಂತರ ಗಣಕಯಂತ್ರದಲ್ಲಿ ಡಿಜಿಟಲ್ 'ಜೀವನ ಪ್ರಮಾಣ ಪತ್ರ'ವು ಸಿದ್ಧವಾಗುತ್ತದೆ ಮತ್ತು ನಿವೃತ್ತಿ ವೇತನವನ್ನು ನೀಡುವ ಸಂಬಂಧಿತ ಸಂಸ್ಥೆಯ ಬಳಿ ಅದು ಜಮೆಯಾಗುತ್ತದೆ. ಇದರ ಮುದ್ರಿತ ಪ್ರತಿಯು ನಿವೃತ್ತಿ ವೇತನದಾರರಿಗೂ ಸಿಗುತ್ತದೆ. ಈ ಪ್ರತಿಯನ್ನು ನಿವೃತ್ತಿ ವೇತನದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಥವಾ ಸಂದೇಹ ಗಳಿದ್ದರೆ https://jeevanpramaan.gov.in ಈ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಂಬಂಧಿತ ಬ್ಯಾಂಕನ್ನು ಸಂಪರ್ಕಿಸಿ !'
ಇನ್ನು ಮುಂದೆ ನಿವೃತ್ತಿ ವೇತನದಾರರು ವರ್ಷವಿಡೀ ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದರೂ 'ಜೀವನ ಪ್ರಮಾಣಪತ್ರವನ್ನು ನೀಡಬಹುದು. ನಿವೃತ್ತಿ ವೇತನದಾರರು ಸಲ್ಲಿಸಿದ 'ಜೀವನ ಪ್ರಮಾಣಪತ್ರಕ್ಕೆ ೧ ವರ್ಷದ ವರೆಗೆ ಮಾತ್ರ ವ್ಯಾಲಿಡಿಟಿ ಇರುತ್ತದೆ. ಹಾಗಾಗಿ ಒಂದು ವರ್ಷ ಪೂರ್ಣವಾದೊಡನೆ ಮುಂದಿನ ವರ್ಷಕ್ಕಾಗಿ ಪುನಃ ಪತ್ರವನ್ನು ಸಲ್ಲಿಸುವುದು ಆವಶ್ಯಕವಾಗಿದೆ. ಕೇಂದ್ರಸರಕಾರದ ಸಿಬ್ಬಂದಿಗಳು ಈ ವರ್ಷ ೧ ನವೆಂಬರ್ ದಿಂದ ೩೧ ಡಿಸೆಂಬರ್ ೨೦೨೦ ಈ ಅವಧಿಯಲ್ಲಿ 'ಜೀವನ ಪ್ರಮಾಣಪತ್ರವನ್ನು ನೀಡಬಹುದು .
ಕೆಲವು ಸರಕಾರಿ ನೌಕರರಿಗೆ ಸಂಬಂಧಿಸಿದ ನಿವೃತ್ತಿ ವೇತನವನ್ನು ನೀಡುವ ಸಂಸ್ಥೆಗಳಲ್ಲಿ ಡಿಜಿಟಲ್ 'ಜೀವನ ಪ್ರಮಾಣಪತ್ರವನ್ನು ಸ್ವೀಕರಿಸುವ ಸೌಲಭ್ಯವು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಆದ್ದರಿಂದ ಆ ವೇತನದಾರರಿಗೆ ಮೊದಲಿನಂತೆ ಬ್ಯಾಂಕಿನ ಅಧಿಕಾರಿಗಳ ಹಸ್ತಾಕ್ಷರವಿರುವ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದಕ್ಕಾಗಿ ಸಂಬಂಧಿತ ಬ್ಯಾಂಕಿನ ಸ್ಥಳೀಯ ಶಾಖೆಯಲ್ಲಿ ತಮ್ಮ ಈ ಮೇಲಿನ ಕಾಗದಪತ್ರಗಳನ್ನು ತೋರಿಸಿ ಮುಂದಿನ ಪ್ರಕ್ರಿಯೆಯನ್ನು ಮಾಡಬೇಕು.