ಪತ್ತನಂತಿಟ್ಟು: ಮಂಡಲ ಪೂಜೆಗಳಿಗಾಗಿ ನಾಳೆ ಸಂಜೆ 5 ಗಂಟೆಗೆ ಶಬರಿಮಲೆ ಬಾಗಿಲು ತೆರೆಯಲಿದೆ. ಸೋಮವಾರದಿಂದ ಯಾತ್ರಿಕರು ಪ್ರವೇಶಿಸಬಹುದು. ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಮೊದಲೇ ನೋಂದಾಯಿಸಿಕೊಂಡ ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತದೆ.
ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ವ್ಯವಸ್ಥೆಗಳಿರಲಿವೆ . 60 ರಿಂದ 65 ವರ್ಷದೊಳಗಿನವರಿಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯವಾಗಿದೆ. ಯಾತ್ರಾರ್ಥಿಗಳು 24 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆ ನಡೆಸಿದ ಪ್ರಮಾಣಪತ್ರ ಹೊಂದಿರಬೇಕು. ಸನ್ನಿಧಿ ತಲಪಲು ಬೆಟ್ಟ ಏರುವ ವೇಳೆ ಮಾಸ್ಕ್ ಕಡ್ಡಾಯವಲ್ಲ. ಮಾಸ್ಕ್, ಕ್ಯೆಗವಸುಗಳ ಸಂಗ್ರಹಣೆ ಮತ್ತು ವಿಲೇವಾರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೋಂಕುನಿವಾರಕಗೊಳಿಸಲು ಅಂಗಡಿಗಳಲ್ಲಿ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್ ಗಳು ಲಭ್ಯವಿರಲಿದೆ. ವೈದ್ಯಕೀಯ ಕೇಂದ್ರಗಳು, ಆಮ್ಲಜನಕ ಪಾರ್ಲರ್‌ಗಳು ಇತ್ಯಾದಿಗಳು ಸಹ ಕಾರ್ಯನಿರ್ವಹಿಸುತ್ತವೆ.