ಕಾಸರಗೋಡು: ಕೋವಿಡ್ ಪ್ರತಿರೋಧಕ್ಕೆ ಕೋವಿಡ್ ಟೆಸ್ಟ್ ಚಾಲೆಂಜ್ ಅಭಿಯಾನ ಆರಂಭಗೊಂಡಿದೆ.
ಜಿಲ್ಲಾ ಐ.ಇ.ಸಿ. ಕೋರ್ ಸಮಿತಿ ವತಿಯಿಂದ ಈ ಅಭಿಯಾನ ಆರಂಭಗೊಂಡಿದೆ. ಕೋವಿಡ್ ಟೆಸ್ಟ್ ಗಳ ಸಂಖ್ಯೆ ಹೆಚ್ಚಳದ ಉದ್ದೇಸದೊಂದಿಗೆ ಕೋವಿಡ್ ಟೆಸ್ಟ್ ಚಾಲೆಂಜ್ ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಮೊದಲ ದಿನ ಆಂಟಿಜೆನ್ ಟೆಸ್ಟ್ ನಡೆಸಿದ ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್ ಅವರು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಚಾಲೆಂಜ್ ಮಾಡಿದರು. ಸಾರ್ವಜನಿಕರೂ ಕೋವಿಡ್ ಟೆಸ್ಟ್ ಚಾಲೆಂಜ್ ನಲ್ಲಿ ಭಾಗಿಗಲಾಗಬಹುದು. ಆಂಟಿಜೆನ್ ಟೆಸ್ಟ್ ನಡೆಸುವ ಫೆÇಟೋ ಕೋವಿಡ್ ಟೆಸ್ಟ್ ಚಾಲೆಂಜ್ ಎಂಬ ಹಾಷ್ ಟಾಗ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟ್ ನಡೆಸುವ ಮೂಲಕ ಈ ರೀತಿ ಭಾಗಿಗಳಾಗಬಹುದು.