ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ವಿವಾದಿತ ಕ್ರಷಿ ಮಸೂದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಉಗ್ರ ಸ್ವರೂಪದ ಭಾಷಣಗಳು ಹೊರಬೀಳುವ ಮೂಲಕ ಪ್ರತಿಭಟನೆಯ ಹಿಂದಿನ ಕ್ಯೆಗಳ ಸ್ವರೂಪ ಬಹಿರಂಗಗೊಂಡಿದೆ.
ರೈತರ ಪ್ರತಿಭಟನೆಯ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಪಿತೂರಿ ಇದೆ ಎಂಬ ಅನುಮಾನವನ್ನು ಇದು ಬಲಪಡಿಸುತ್ತದೆ.
ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರ ಗುಂಪು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯನ್ನು ನೆನಪಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದಿರಾ ಗಾಂಧಿಯಂತೆಯೇ ಹತ್ಯೆಗ್ಯೆಯ್ಯುವ ಬೆದರಿಕೆ ಹಾಕಿದೆ. ಪ್ರತಿಭಟನೆಯ ಹಿಂದೆ ಖಲಿಸ್ತಾನ್ ಪರ ಸಂಘಟನೆಗಳು ಇದ್ದವು ಎಂಬ ಸೂಚನೆಗಳಿವೆ.
ಪ್ರತಿಭಟನಾಕಾರರಲ್ಲಿ ಒಬ್ಬರು ಪ್ರಧಾನಿಗೆ ಬೆದರಿಕೆ ಹಾಕುತ್ತಿರುವುದು ಕಂಡುಬಂತು. ‘ನಾವು ಕೆನಡಾದಲ್ಲಿ ಬಿಳಿಯರನ್ನು ಸೋಲಿಸಲು ಸಾಧ್ಯವಾದರೆ, ದೆಹಲಿ ಏನೂ ಅಲ್ಲ. ನಾವು ಇಂದಿರಾ ಅವರನ್ನು ಹತ್ಯೆಗ್ಯೆದಿದ್ದೆವು. ಡಿಸೆಂಬರ್ 3 ರಂದು ನಡೆದ ಮಾತುಕತೆಗಳು ನಿರೀಕ್ಷಿತ ಫಲಿತಾಂಶವನ್ನು ನೀಡದಿದ್ದರೆ, "ಮೋದಿಯವರು ಸಾಯುತ್ತಾರೆ, ಮೋದಿ ಸತ್ತಿದ್ದಾರೆ" ಎಂಬ ಬೆದರಿಕೆಗಳೊಂದಿಗೆ ಪ್ರಧಾನಿ ಮೋದಿಯವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ್ದೂ ಕಂಡುಬಂತು. ‘ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ನಮ್ಮ ಸ್ನೇಹಿತ. ಆದರೆ ನಮ್ಮ ಶತ್ರು ದೆಹಲಿಯಲ್ಲಿದ್ದಾರೆ ”ಎಂದು ವಿಡಿಯೋ ಹೇಳುತ್ತದೆ.