ಮಂಜೇಶ್ವರ: ಕಾಸರಗೋಡು ಜಿಲ್ಲಾ ಪಂಚಾಯತಿಯ ನೆರವಿನೊಂದಿಗೆ ಕುಂಜತ್ತೂರು ವೊಕೇಶನಲ್ ಹೈಯ್ಯರ್ ಸೆಕೆಂಡರಿ ಶಾಲೆಯಲ್ಲಿ ನಿರ್ಮಿಸಲಾದ ಆರ್.ಎಂ.ಎಸ್.ಎ ತರಗತಿ ಕಟ್ಟಡ ಹಾಗೂ ಪ್ರಿಸಂ ಲ್ಯಾಬ್ ಕಟ್ಟಡದ ಉದ್ಘಾಟನೆ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಶುಕ್ರವಾರ ಜರಗಿತು.
30 ಲಕ್ಷ.ರೂ.ವೆಚ್ಚದಲ್ಲಿ ನಿರ್ಮಿಸಲಾದ ಆರ್.ಎಂ.ಎಸ್.ಎ ಕಟ್ಟಡವನ್ನು ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ ಬಶೀರ್ ಉದ್ಘಾಟಿಸಿದರು. 20 ಲಕ್ಷ.ರೂ.ವೆಚ್ಚದಲ್ಲಿ ನಿರ್ಮಿಸಲಾದ ಪ್ರಿಸಂ ಲ್ಯಾಬ್ ಕಟ್ಟಡವನ್ನು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಪಂಚಾಯತು ಸದಸ್ಯೆ ಮುಶ್ರತ್ ಜಹಾನ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಕುಮಾರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ್, ಮಾತೃಸಂಘದ ಅಧ್ಯಕ್ಷೆ ಮೋಹಿನಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹಿಮಾನ್ ಉದ್ಯಾವರ, ಉಪಾಧ್ಯಕ್ಷ ದಯಾಕರ ಮಾಡ,ಎಸ್.ಎಂ.ಸಿ ಸದಸ್ಯ ಯು.ಎಚ್. ಅಬ್ದುಲ್ ರಹ್ಮಾನ್, ಪ್ರಾಂಶುಪಾಲ ಶಿಶುಪಾಲನ್, ಅಧ್ಯಾಪಕ ಸಂಘದ ಪ್ರಮೀಳಾ ಕುಮಾರಿ, ಅಶ್ರಫ್, ಕವಿತಾ, ಉಪಸ್ಥಿತರಿದ್ದರು. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜೆ.ಸ್ವಾಗತಿಸಿ, ಕೆ. ರವೀಂದ್ರ ರೈ ವಂದಿಸಿದರು. ದಿವಾಕರ ಬಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.