ತೊಡುಪುಳ: ಕೇರಳ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಪಿಜೆ ಜೋಸೆಫ್ ಶಾಸಕರ ಕಿರಿಯ ಮಗ ಜೋ ಜೋಸೆಫ್ (34) ನಿಧನರಾದರು. ಅವರು ಇಂದು ಹೃದಯಾಘಾತದಿಂದ ನಿಧನರಾದರು.
ಅಪರಾಹ್ನ ಮಲಗಿದ್ದಾಗ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲಾಗಿಲ್ಲ. ಜೋ ಅಂಗವಿಕಲರಾಗಿದ್ದು ದೀರ್ಘಕಾಲದವರೆಗೆ ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು.