ಮಂಜೇಶ್ವರ: ಜನರು ಹಾಗೂ ವಿದ್ಯಾರ್ಥಿಗಳು ಕೆಲವೊಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಈ ಕಥೆಯನ್ನಾಧರಿಸಿಕೊಂಡು ಜನ ಜಾಗೃತಿಗಾಗಿ "ಆಕಸ್ಮಿಕ" ಎಂಬ ಕನ್ನಡ ಕಿರುಚಿತ್ರ ಮಂಜೇಶ್ವರ, ಉಪ್ಪಳ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರ ಮೂಹೂರ್ತ ಕಾರ್ಯಕ್ರಮವು ಮೂಡಂಬೈಲ್ ದಡ್ಡಂಗಡಿ ತರವಾಡು ಮನೆಯಲ್ಲಿ ಇತ್ತೀಚೆಗೆ ಜರಗಿತು. ಈ ವೇಳೆ ಜರುಗಿದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬಾಲಕೃಷ್ಣ ಭಂಡಾರಿ ದಡ್ಡಂಗಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ.ಹಿ.ಪ್ರಾ.ಶಾ.ಕಾ ಚಲನಚಿತ್ರ ನಟ ರಾಧಾಕೃಷ್ಣ ಕುಂಬಳೆ, ರಂಗ ನಟ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಕೆ. ನಾರಾಯಣ ನಾಯ್ಕ್ ನಡುಹಿತ್ಲು ಕೂಳೂರು, ಛಾಯ ಗ್ರಾಹಕರಾದ ಕೃಷ್ಣ ಶರ್ಮ.ಕೆ ಮತ್ತು ಪ್ರವೀಣ್ ಆಚಾರ್ಯ ಇವರು ಉಪಸ್ಥಿತರಿದ್ದರು. ಅರವಿಂದಾಕ್ಷ ಭಂಡಾರಿ ದದ್ದಂಗಡಿ ಸ್ವಾಗತಿಸಿ, ವಂದಿಸಿದರು. ಈ ಕಿರುಚಿತ್ರದಲ್ಲಿ ನಿರ್ಮಾಪಕರಾಗಿ ವಸಂತ್ ಶೆಟ್ಟಿ ದಡ್ಡಂಗಡಿ ಹಾಗೂ ಕಥೆ ಮತ್ತು ನಿರ್ದೇಶಕರಾಗಿ ಪ್ರೀತೇಶ್ ಶೆಟ್ಟಿ ದಡ್ಡಂಗಡಿ ಸಹಕರಿಸುತ್ತಿದ್ದಾರೆ.