ತಿರುವನಂತಪುರ: ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರಜೆಯ ಮೇಲೆ ಹುದ್ದೆ ತೊರೆದಿದ್ದು ಅವರ ಬದಲಿಗೆ ವಿಜಯರಾಘವನ್ ಉಸ್ತುವಾರಿ ವಹಿಸುವರು ಎಂದು ಸಿಪಿಐಎಂ ತಿಳಿಸಿದೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅನಾರೋಗ್ಯ ಕಾರಣ ಚಿಕಿತ್ಸೆಗಾಗಿ ಕಾರ್ಯದರ್ಶಿ ಹುದ್ದೆ ತೊರೆದಿದ್ದು ಅವರ ಸ್ಥಾನಕ್ಕೆ ಎಡರಂಗದ ಕನ್ವೀನರ್ ಎ ವಿಜಯರಾಘವನ್ ಅವರನ್ನು ನೇಮಿಸಲಾಗಿದೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಅನುಪಸ್ಥಿತಿಯ ರಜೆ ನೀಡಬೇಕು ಎಂಬ ಬೇಡಿಕೆಗೆ ರಾಜ್ಯ ಸಚಿವಾಲಯ ಅನುಮೋದನೆ ನೀಡಿದೆ. ವಿಜಯರಾಘವನ್ ಕಾರ್ಯದರ್ಶಿಯಾಗಲಿದ್ದಾರೆ. ರಾಜ್ಯ ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನು ಪಕ್ಷದ ಫೇಸ್‍ಬುಕ್ ಪುಟದಲ್ಲೂ ಹಂಚಿಕೊಳ್ಳಲಾಗಿದೆ.
ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ವಿವಾದಗಳಿಗೆ ಸಿಲುಕಿ ಬಂಧನದಲ್ಲಿದ್ದು ನೈತಿಕ ಹೊಣೆಹೊತ್ತು ಕೊಡಿಯೇರಿ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದಿರುವರೆಂದು ಹೇಳಲಾಗಿದೆ. ಸ್ಥಳೀಯಾಡಳಿತ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ ಎಂಬುದು ಗಮನಾರ್ಹ. ಕೊಡಿಯೇರಿ ಅವರು 2015 ರಲ್ಲಿ ಆಲಪ್ಪುಳದಲ್ಲಿ ನಡೆದ ಪಕ್ಷ ರಾಜ್ಯ ಸಮಾವೇಶದಲ್ಲಿ ಪಿಣರಾಯಿ ವಿಜಯನ್ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದರು. ಬಳಿಕ 2018 ರಲ್ಲಿ ಕೋಝಿಕ್ಕೋಡ್ ಸಮಾವೇಶದಲ್ಲೂ ಕೊಡಿಯೇರಿಯನ್ನು ಕಾರ್ಯದರ್ಶಿಯಾಗಿ ಮುಂದುವರಿಸಲು ತೀರ್ಮಾನಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಎನ್‍ಕೆ ಪ್ರೇಮಚಂದ್ರನ್ ಅವರು ಕೊಡಿಯೇರಿ ರಜೆಯಲ್ಲಿ ತೆರಳಿದ್ದರೂ ಅದನ್ನು ರಾಜೀನಾಮೆ ಎಂದು ಪರಿಗಣಿಸಬಹುದೆಂದು ತಿಳಿಸಿದ್ದಾರೆ. ಏತನ್ಮಧ್ಯೆ, ಕೊಡಿಯೇರಿ ಚಿಕಿತ್ಸೆಯ ಬಳಿಕ ಹಿಂದಿರುಗಲಿದ್ದಾರೆ ಎಂದು ಸಿಪಿಎಂ ಮುಖಂಡ ಅನಂತಲವತ್ತಂ ಆನಂದನ್ ಹೇಳಿದ್ದಾರೆ.