ಕೊಚ್ಚಿ: ಕೇರಳದ ಪೆÇಲೀಸ್ ಠಾಣೆಗಳಲ್ಲಿ ವ್ಯಾಪಕವಾದ ಕಸ್ಟಡಿ ಸಾವಿನ ಬಗ್ಗೆ ಅಮೆರಿಕದ ಮಾಧ್ಯಮ ವೈಸ್ ಸುದ್ದಿ ಮಾಡಿದೆ. ತನಿಖಾ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾದ ವೈಸ್ ಮೀಡಿಯಾ, ಯುನೈಟೆಡ್ ಸ್ಟೇಟ್ಸ್ನಲ್ಲಿ ಜಾರ್ಜ್ ಫ್ಲಾಯ್ಡ್ ನಿಧನದ ಬಳಿಕ ಅನ್ವೇಷಣಾ ವರದಿಗಾರಿಕೆಯಲ್ಲಿ ವೈಸ್ ಮೀಡಿಯಾ ಜನಜನಿತವಾಗಿದೆ.
ವೈಸ್ ಮೀಡಿಯಾವು ನವೆಂಬರ್ 24 ರ ಸಂಚಿಕೆಯಲ್ಲಿ ಕೇರಳದಲ್ಲಿ ನಡೆಯುತ್ತಿರುವ ನಿರಂತರ ಕಸ್ಟಡಿ ಮರಣಗಳನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದೆ. ವೈಸ್‍ನ ವರದಿ ವಿವಾದಾತ್ಮಕ ಉದಯಕುಮಾರ್ ಪ್ರಕರಣವನ್ನು ಆಧರಿಸಿದೆ. ಹೆಚ್ಚಿನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ಕೇರಳದಲ್ಲಿ ಅಧಿಕಾರದ ದುರುಪಯೋಗವನ್ನು ನಿವಾರಿಸುವ ಮತ್ತು ನ್ಯಾಯ ಪಡೆಯುವ ಪ್ರಾಯೋಗಿಕತೆಯನ್ನು ಈ ಘಟನೆ ಪುನರವಲೋಕನಕ್ಕೆ ಪ್ರೇರೇಪಿಸಿದೆ ಎಂದು ವೈಸ್ ಬೊಟ್ಟುಮಾಡಿದೆ.
ಉದಯಕುಮಾರ್ ಪ್ರಕರಣದ ಜೊತೆಗೆ, ಎರ್ನಾಕುಳಂನ ಫಿಟ್ನೆಸ್ ತರಬೇತುದಾರ ಜಯರಾಜ್ ಅವರ ಕಸ್ಟಡಿ ಚಿತ್ರಹಿಂಸೆ ಕೂಡ ಇದೆ. ಉದಯಕುಮಾರ್ ಅವರನ್ನು 2005 ರಲ್ಲಿ ತಿರುವನಂತಪುರಂನಲ್ಲಿ ಪೆÇಲೀಸ್ ವಶಕ್ಕೆ ತೆಗೆದುಕೊಳ್ಳಲಾಯಿತು. ಉದಯಕುಮಾರ್ ಸ್ಕ್ರ್ಯಾಪ್ ವ್ಯಾಪಾರಿ. ಉದಯಕುಮಾರ್‍ನನ್ನು ಹತ್ಯೆಗೈದ ಪ್ರಕರಣದ ಬಗ್ಗೆ ಅವರ ಕುಟುಂಬವು ಬಳಿಕ ಕಾನೂನು ಹೋರಾಟಕ್ಕೆ ಇಳಿಯಿತು.
ವಿಚಾರಣಾ ನ್ಯಾಯಾಲಯವು 13 ವರ್ಷಗಳ ಕಾನೂನು ಹೋರಾಟದ ನಂತರ 2018 ರಲ್ಲಿ ತೀರ್ಪು ನೀಡಿತು. ಇಬ್ಬರು ಪೆÇಲೀಸರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.