ವಯನಾಡ್: ವಯನಾಡ್ ಜಿಲ್ಲೆಯ ಬಾಣಾಸುರ ಅರಣ್ಯದಲ್ಲಿ ಮಾವೋವಾದಿ ತಂಡ ಮತ್ತು ಪೋಲೀಸರ ಮಧ್ಯೆ ಇಂದು ಬೆಳಿಗ್ಗೆ ನಡೆದ ಘರ್ಷಣೆಯಲ್ಲಿ ಓರ್ವ ಮಾವೋವಾದಿ ಮೃತಪಟ್ಟ ಘಟನೆ ನಡೆದಿದೆ.
ಪಡಿಂಞರತ್ತರ ಮತ್ತು ಬಾಣಾಸುರ ನಡುವಿನ ವಾಳರಂಕುನ್ನು ಪ್ರದೇಶದಲ್ಲಿ ಪೋಲೀಸ್ ತಂಡರ್ ಬೋಲ್ಟ್ ತಂಡ ಹಾಗೂ ಪೋವೋವಾದಿ ಗುಂಪಿನ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ತಂಡರ್ಬೋಲ್ಟ್ ಗುಂಪಿನ ಮೇಲೆ ಮಾವೋವಾದಿಗಳು ಹಲ್ಲೆ ಮಾಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕೊಲ್ಲಲ್ಪಟ್ಟ ಮಾವೋವಾದಿಯ ವಿವರಗಳು ಇನ್ನೂ ತಿಳಿದುಬಂದಿಲ್ಲ. ಪೆÇಲೀಸರ ಪ್ರಕಾರ ಮಾವೋವಾದಿ ಗುಂಪಿನಲ್ಲಿ ಮೂರು ಅಥವಾ ನಾಲ್ಕು ಸದಸ್ಯರು ಇದ್ದಾರೆನ್ನಲಾಗಿದೆ. ಘಟನಾ ಸ್ಥಳದಿಂದ ಡಬಲ್ ಬ್ಯಾರೆಲ್ ಗನ್ ವಶಪಡಿಸಿಕೊಳ್ಳಲಾಗಿದೆ.
ಏತನ್ಮಧ್ಯೆ ವಯನಾಡಲ್ಲಿ ನಡೆದದ್ದು ನಕಲಿ ಎನ್ಕೌಂಟರ್ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಯುವಕರ ಮೇಲೆ ಗುಂಡು ಹಾರಿಸುವುದು ಉತ್ತರವಲ್ಲ. ಹಸಿವನ್ನು ನೀಗಿಸುವುದು ಮಾವೋವಾದಿಗಳಿಗೆ ನೀಡುವ ಉತ್ತರವಾಗಿರಬೇಕು. ಮಾವೋವಾದವನ್ನು ಲಾಠಿ ಮತ್ತು ಬಂದೂಕುಗಳಿಂದ ಎದುರಿಸಲಾಗದು ಎಂದು ಅವರು ಎನ್ಕೌಂಟರ್ ನ್ನು ಬಲವಾಗಿ ಖಂಡಿಸಿರುವರು.
ಬಾಣಾಸುರ ಅರಣ್ಯ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣ ಹಾಗೂ ಕಗ್ಗಲ್ಲ ಕ್ವಾರೆಗಳು ಭಾರೀ ಸಂಖ್ಯೆಯಲ್ಲಿ ಅರಣ್ಯ ನಾಶಗೈಯ್ಯುತ್ತಿರುವುದನ್ನು ನಿಯಂತ್ರಿಸಲು ಸ್ಥಳೀಯರೇ ಮಾವೋವಾದಿಗಳಾಗಿ ಬದಲಾದರೆಂದು ತಿಳಿದುಬಂದಿದೆ. ಪ್ರಾಕೃತಿಕವಾಗಿ ಭಾರೀ ಭೂಕುಸಿತ ಸಹಿತ ಪ್ರಕೃತಿ ವಿಕೋಪಗಳಿಗೆ ಕಾರಣವಾಗುವ ಸ್ಪೋಟಗಳು ನಿರಂತರವಾಗಿ ಈ ಪ್ರದೇಶದಲ್ಲಿ ನಡೆಯುತ್ತಿದ್ದು ಪಾರಂಪರಿಕ ಬುಡಕಟ್ಟು ಜನಾಂಗ ಸಂಕಷ್ಟಕ್ಕೊಳಗಾಗಿ ಅತಂತ್ರವಾಗುತ್ತಿದೆ ಎಂದು ಹೇಳಲಾಗುತ್ತಿದೆ.