ಬೆಂಗಳೂರು: ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾಗ ಬಿನೀಶ್ ಕೊಡಿಯೇರಿ ಮೊಬೈಲ್ ಫೆÇೀನ್ ಬಳಸಿರುವುದು ಕಂಡುಬಂದಿದೆ. ವಿಲ್ಸನ್ ಗಾರ್ಡನ್ ಪೆÇಲೀಸ್ ಠಾಣೆಯಲ್ಲಿ ತನ್ನ ಮೊಬೈಲ್ ಫೆÇೀನ್ ಬಳಸಿದ್ದಾಗಿ ಇಡಿ ಹೇಳಿದೆ. ಇದರ ಬೆನ್ನಲ್ಲೇ ಬಿನೀಶ್ ಅವರನ್ನು ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಗೆ ವರ್ಗಾಯಿಸಲಾಯಿತು.
ಕಳೆದ 11 ದಿನಗಳಿಂದ ಬಿನೀಶ್ ಇಡಿ ವಶದಲ್ಲಿದ್ದಾರೆ. ಈ ಸಮಯದಲ್ಲಿ ಮೊಬೈಲ್ ಫೆÇೀನ್ ಬಳಸಲಾಗಿದೆ ಎಂದು ಗುಪ್ತಚರ ಘಟಕ ಇಡಿಗೆ ವರದಿ ಮಾಡಿದೆ. ಇದರ ಬೆನ್ನಲ್ಲೇ ಬಿನೀಶ್ ಅವರನ್ನು ಕಬ್ಬನ್ ಪಾರ್ಕ್ ಠಾಣೆಗೆ ವರ್ಗಾಯಿಸಲಾಯಿತು.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿನೀಶ್ ಅವರ ಬಂಧನವನ್ನು ನವೆಂಬರ್ 7 ರಂದು ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು. ಬೆಂಗಳೂರು ಸಿವಿಲ್ ಮತ್ತು ಸಿಟಿ ಸೆಷನ್ಸ್ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
ಅನೂಪ್ ಮೊಹಮ್ಮದ್ ಅವರ ಎಟಿಎಂ ಕಾರ್ಡ್ ಬಿನೀಶ್ ಅವರ ಮನೆಯಲ್ಲಿ ಪತ್ತೆಯಾಗಿದೆ. ಕಾರ್ಡ್‍ನಲ್ಲಿ ಬಿನೀಶ್ ಅವರ ಸಹಿ ಇದೆ ಎಂದು ಇಡಿ ಹೇಳಿದೆ. ಇದನ್ನು ಸೂಚಿಸಿದ ಇಡಿ ಹೆಚ್ಚಿನ ದಿನಗಳ ಕಸ್ಟಡಿ ಕೇಳಿದೆ.