ಬೆಂಗಳೂರು: ಸಂಪರ್ಕ ಸೇವೆಗೆ ಬಳಸಲಾಗುವ ಉಪಗ್ರಹ ಸಿಎಂಎಸ್-01 ಅನ್ನು ಪೊಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್‌ಎಲ್‌ವಿ-ಸಿ50) ಮೂಲಕ ಡಿಸೆಂಬರ್ 17ರಂದು ಉಡಾವಣೆ ಮಾಡಲಾಗುತ್ತದೆ.
ಶ್ರೀಹರಿಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ನಡೆಯಲಿದ್ದು, ಇದು ಪಿಎಸ್‌ಎಲ್‌ವಿ ಸರಣಿಯ 5ನೇ ಕಾರ್ಯಕ್ರಮವಾಗಿದೆ. ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ಅಂದು ಮಧ್ಯಾಹ್ನ 3.41 ಗಂಟೆಗೆ ಉಡಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೊ ಸಂಸ್ಥೆಯ ತಿಳಿಸಿದೆ.
ಸಿಎಂಎಸ್ -01 ಸಂಪರ್ಕ ಸೇವೆಯ ಉಪಗ್ರಹವಾಗಿದ್ದು, ವಿಸ್ತರಿಸಲಾದ ಸಿ-ಬ್ಯಾಂಡ್ ತರಂಗಾಂತರದಲ್ಲಿ ಸೇವೆಯನ್ನು ಕಲ್ಪಿಸಲಿದೆ ಎಂದು ಹೇಳಿಕೆಯು ತಿಳಿಸಿದೆ. ಇದು, ಭಾರತದ 43ನೇ ಸಂವಹನ ಉಪಗ್ರಹವಾಗಿದೆ.