ಮುಳ್ಳೇರಿಯ: ವಯೋಸಹಜ ದೈಹಿಕ ಕ್ಷೀಣದ ಹೊರತಾಗಿಯೂ, 103 ವರ್ಷದ ನಿಟ್ಟೋಣಿ ಈ ಬಾರಿಯೂ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮತದಾನಗೈಯ್ಯಲು ಆಗಮಿಸಿ ಎಲ್ಲರ ಕುತೂಹಲ ಮತ್ತು ಹಕ್ಕಿನ ಮಹತ್ವದ ಬಗ್ಗೆ ಜಾಗೃತಿಗೆ ಕಾರಣರಾದರು.
ಸೋಮವಾರ ಬೆಳಿಗ್ಗೆಯೇ ಅವರು ತಮ್ಮ ಮೊಮ್ಮಗ ರವಿ ಅವರೊಂದಿಗೆ ಬೆಳ್ಳೂರು ಜಿಎಚ್‍ಎಸ್‍ಎಸ್ ಶಾಲಾ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. 103 ರ ಹರೆಯದಲ್ಲೂ ಹುರುಪಿನಿಂದ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿ ನಿಟ್ಟೋಣಿ ಆದರ್ಶಪ್ರಾಯರಾಗಿದ್ದಾರೆ.
ಅತೀ ಹಿರಿಯ ಭೂತ ನೃತ್ಯ ಕಲಾವಿದ ಮತ್ತು ಸಾಂಪ್ರದಾಯಿಕ ವೈದ್ಯರಾದ ನಿಟ್ಟೋಣಿ ಬೆಳ್ಳೂರಿನ ಕುದು ಎಂಬಲ್ಲಿ ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು ಮತ್ತು ವ್ಯವಸ್ಥೆಯನ್ನು ಅರ್ಥಪೂರ್ಣವಾಗಿಸುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಟ್ಟೋಣಿ ಈ ಮೂಲಕ ಪ್ರತಿಪಾದಿಸಿದ್ದಾರೆ.