ಕಾಸರಗೋಡು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂರನೇ ಹಂತದಲ್ಲಿ ರಾಜ್ಯದಲ್ಲಿ ಬೆಳಿಗ್ಗೆ 10.30 ರವರೆಗೆ ಶೇ.23.83 ಮತದಾನವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ ಶೇ 25.56 ರಷ್ಟು ಮತದಾನವಾಗಿದೆ. ಕಣ್ಣೂರು 23.76, ಕೋಝಿಕ್ಕೋಡ್ 23.33 ಮತ್ತು ಮಲಪ್ಪುರಂ 24.34.ರಷ್ಟಿದೆ. ಈವರೆಗೆ 267811 ಜನರು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. 137828 ಪುರುಷ ಮತದಾರರು ಮತ್ತು 129983 ಮಹಿಳಾ ಮತದಾರರು ಮತ ಚಲಾಯಿಸಲು ನೋಂದಾಯಿಸಿದ್ದಾರೆ. ವಿಶೇಷ ಲಿಂಗಿಗಳ ವಿಭಾಗದಲ್ಲಿ ಮತ ಚಲಾಯಿಸಲು ಈವರೆಗೆ ಯಾರೂ ನೋಂದಾಯಿಸಿಲ್ಲ.(ಚಿತ್ರ:ಮೀಂಜ ಪಂಚಾಯತ್ ಮಜಿಬೈಲು ವಾರ್ಡ್ ನ ಮಜಿಬೈಲು ಎ. ಲ್. ಪಿ ಶಾಲೆ)