HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಜಿಲ್ಲೆಯಲ್ಲಿ ಒಟ್ಟು 10,48,566 ಮತದಾರರು,2648 ಅಭ್ಯರ್ಥಿಗಳು: ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣ: ಜಿಲ್ಲಾಧಿಕಾರಿ


        ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಡಿ.14ರಂದು ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 

           ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ಪ್ರಕಟಿಸಿದರು. 

     ಜಿಲ್ಲೆಯಲ್ಲಿ ಒಟ್ಟು 1409 ಮತಗಟ್ಟೆಗಳಿವೆ. ತ್ರಿಸ್ತರ ಪಂಚಾಯತ್ ಗಳಲ್ಲಿ ಬ್ಯಾಲೆಟ್ ಯೂನಿಟ್ ಗ್ರಾಮ, ಬ್ಲೋಕ್, ಜಿಲ್ಲಾ ಪಂಚಾಯತ್ ಗಳು ಎಂಬ ಕ್ರಮದಲ್ಲಿ, ನಗರಸಭೆ ಒಂದೇ ಬ್ಯಾಲೆಟ್ ಯೂನಿಟ್ ಕ್ರಮದಲ್ಲಿ ಚುನಾವಣೆ ನಡೆಯಲಿದೆ. 

             ಒಟ್ಟು 10,48566 ಮತದಾತರು, 79 ಆನಿವಾಸಿ ಮತದಾತರು: 

       ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು  10,48566 ಮತದಾತರು, 79 ಆನಿವಾಸಿ ಮತದಾತರು ಇದ್ದಾರೆ. 

         6 ಬ್ಲೋಕ್ ಪಂಚಾಯತ್ ಗಳಲ್ಲಿ 921656 ಮಂದಿ ಮತದಾತರಿದ್ದಾರೆ. ಇವರಲ್ಲಿ 442893 ಮಂದಿ ಪುರುಷರು, 478757 ಮಂದಿ ಮಹಿಳೆಯರು, 6 ಮಂದಿ ಟ್ರಾನ್ಸ್ ಜೆಂಡರ್ ಇದ್ದಾರೆ. ಇದಲ್ಲದೆ 71 ಮಂದಿ ಆನಿವಾಸಿ ಮತದಾತರಿದ್ದಾರೆ. 

        3 ನಗರಸಭೆಗಳಲ್ಲಿ ಒಟ್ಟು 126910 ಮಂದಿ ಮತದಾತರಿದ್ದಾರೆ. ಇವರಲ್ಲಿ 59123 ಮಂದಿ ಪುರುಷರು, 67786 ಮಂದಿ ಮಹಿಳೆಯರು, ಒಬ್ಬರು ಟ್ರಾನ್ಸ್ ಜೆಂಡರ್, ಅಲ್ಲದೆ 8 ಮಂದಿ ಆನಿವಾಸಿ ಮತದಾತರಿದ್ದಾರೆ. 

          ಜಿಲ್ಲೆಯಲ್ಲಿ ಒಟ್ಟು 2648 ಅಭ್ಯರ್ಥಿಗಳು: 

      ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2648 ಮಂದಿ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯ ಸ್ಪರ್ಧಾ ರಂಗದಲ್ಲಿದ್ದಾರೆ.                   

     ಗ್ರಾಮ ಪಂಚಾಯತ್ ಗಳಲ್ಲಿ ಒಟ್ಟು 1991 ಮಂದಿ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 971 ಮಂದಿ ಪುರುಷರು, 1020 ಮಂದಿ ಮಹಿಳೆಯರು. 38 ಗ್ರಾಮ ಪಂಚಾಯತ್ ಗಳ ಮೂಲಕ 664 ವಾರ್ಡ್ ಗಳಿವೆ. ಅವುಗಳ 1287 ಮತಗಟ್ಟೆಗಳಿವೆ. 

       6 ಬ್ಲೋಕ್ ಪಂಚಾಯತ್ ಗಳಲ್ಲಿ 83 ಡಿವಿಝನ್ ಗಳಿವೆ. ಇವುಗಳಲ್ಲಿ ಒಟ್ಟು 263 ಅಭ್ಯರ್ಥಿಗಳು ರಂಗದಲ್ಲಿದ್ದಾರೆ. ಇವರಲ್ಲಿ 126 ಮಂದಿ ಪುರುಷರು, 137 ಮಂದಿ ಮಹಿಳೆಯರು. 

      3 ನಗರಸಭೆಗಳಲ್ಲಿ 113 ವಾರ್ಡ್ ಗಳಲ್ಲಿ ಒಟ್ಟು 329 ಮಂದಿ ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ 166 ಮಂದಿ ಪುರುಷರು, 163 ಮಂದಿ ಮಹಿಳೆಯರು ರಂಗದಲ್ಲಿದ್ದಾರೆ.  

        ಜಿಲ್ಲಾ ಪಂಚಾಯತ್ ನ 17 ಡಿವಿಝನ್ ಗಳಲ್ಲಿ ಒಟ್ಟು 65 ಸ್ಪರ್ಧಾಳುಗಳು ರಂಗದಲ್ಲಿರುವುರು. ಇವರಲ್ಲಿ 36 ಮಂದಿ ಪುರುಷರು, 29 ಮಂದಿ ಮಹಿಳೆಯರು.  

          ವಿದ್ಯುನ್ಮಾನ ಮತಯಂತ್ರಗಳ ವಿತರಣೆ :

      ಜಿಲ್ಲೆಯಲ್ಲಿ ಅಗತ್ಯವಿರುವ ಪ್ರಮಾಣದಲ್ಲಕಿ ವಿದ್ಯುನ್ಮಾನ ಮತಯಂತ್ರಗಳು ಲಭ್ಯವಿವೆ. ನಗರಸಭೆಗಳಲ್ಲಿ ಮತದಾನಕ್ಕಾಗಿ 122 ಸಿಂಗಲ್ ಪೆÇೀಸ್ಟ್ ವಿದ್ಯುನ್ಮಾನ ಮತಯಂತ್ರಗಳು, ಗ್ರಾಮ ಪಂಚಾಯತ್ ಗಳಲ್ಲಿ 1287 ಮಲ್ಟಿ ಪೆÇೀಸ್ಟ್ ವಿದ್ಯುನ್ಮಾನ ಮತಯಂತ್ರಗಳು ಅಗತ್ಯವಿವೆ. ಚುನಾವಣೆಗೆ ಅಗತ್ಯವಿರುವ ಪ್ರಮಾಣದ ಮತಯಂತ್ರಗಳು ಸೇ 20 ಹೆಚ್ಚುವರಿ ಸಹಿತ ಆಯಾ ಬ್ಲೋಕ್/ನಗರಸಭೆ ಗಳ ರಿಟನಿರ್ಂಗ್ ಆಪೀಸರ್ ಗಳಿಗೆ ಡಿ.8ರಂದು ವಿತರಣೆ ನಡೆಸಲಾಗಿದೆ. 

                        ಕೋವಿಡ್ ಪ್ರತಿರೋಧ: 

    ಕೋವಿಡ್ ಪ್ರತಿರೋಧ ಸಂಬಂಧ ಎಲ್ಲ ಕ್ರಮಗಳ ಸಹಿತ ಈ ಬಾರಿಯ ಚುನಾವಣೆ ಪ್ರಕ್ರಿಯೆಗಳು ನಡೆಯಲಿವೆ. ಈ ಸಂಬಮದ ಅಗತ್ಯದ ಎಲ್ಲ ಸಾಮಾಗ್ರಿಗಳನ್ನೂ ಮತಗಟ್ಟೆಗಳಿಗಾಗಿ ರಿಟನಿರ್ಂಗ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಒಟ್ಟು 9863 ಲೀಟರ್ ಸಾನಿಟೈಸರ್, ಅದಕ್ಗಕೆ ಪೂರಕವಾಗಿ ಮಾಸ್ಕ್ , ಗ್ಲೌಸ್, ಫೇಸ್ ಶೀಲ್ಡ್ ಇತ್ಯಾದಿಗಳನ್ನು ಸಜ್ಜುಗೊಳಿಸಲಾಗಿದೆ. 

                ಸಿಬ್ಬಂದಿ ನೇಮಕ: 

      ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆ ಸಂಬಂಧ 8527 ಮಂದಿ ಪೆÇೀಲಿಂಗ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ಇವರಲ್ಲಿ ಸೇ 20 ರಿಸರ್ವ್ ಸಿಬ್ಬಂದಿಯೂ ಸೇರಿದ್ದಾರೆ. ಇವರಲ್ಲಿ 3752 ಮಂದಿ ಪುರುಷರು, 4775 ಮಂದಿ ಮಹಿಳೆಯರು ಇದ್ದಾರೆ. 1709 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳು, 1709 ಫಸ್ಟ್ ಪೆÇೀಲಿಂಗ್ ಅಧಿಕಾರಿಗಳು, 1709 ಮಂದಿ ಪೆÇೀಲಿಂಗ್ ಸಹಾಯಕರೂ ಇದ್ದಾರೆ. ಜಿಲ್ಲೆಯಲ್ಲಿ 86 ಸೆಕ್ಟರಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ.  

         ಪ್ರಿಸೈಡಿಂಗ್ ಅಧಿಕಾರಿಗಳಿಗೆ ಮತ್ತು ಫಸ್ಟ್ ಪೆÇೀಲಿಂಗ್ ಅಧಿಕಾರಿಗಳಿಗೆ ತರಬೇತಿ ಈಗಾಗಲೇ ಪೂರ್ಣಗೊಂಡಿದೆ. ಸೆಕ್ಟರಲ್ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಚುನಾವಣೆ ಸಂಬಮಧ ವಿವಿಧ ಕರ್ತವ್ಯಗಳನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ ಸಹಾಯಕ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಗಳು, ಸಹಾಯಕ ತಹಸೀಲ್ದಾರ್ ಗಳು ಇತ್ಯಾದಿ ಹುದ್ದೆಗಳಲ್ಲಿರುವ 18 ನೋಡೆಲ್ ಅಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಪ್ರಕಟಿಸಲಾಗಿದೆ. 

             ವಿದ್ಯುನ್ಮಾನ ಮತಯಂತ್ರಗಳ ಕಮೀಷನಿಂಗ್:

      ವಿದ್ಯುನ್ಮಾನ ಮತಯಂತ್ರಗಳ ಕಮೀಷನಿಂಗ್ ಸಂಬಂಧ ಚಟುವಟಿಕೆಗಳ ಹೊಣೆಯಿರುವ ಎಲ್ಲ ಸಿಬ್ಬಂದಿಗೆ ಬ್ಲೋಕ್/ ನಗರಸಭೆ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಡಿ.11ರಂದು ಮತಗಣನೆ ಹೊಣೆಗಾರಿಕೆ ಇರುವ ಸಿಬ್ಬಂದಿಗೆ, ಡಿ.12ರಂದು ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಹೊಣೆಗಾರಿಕೆಯಿರುವ, ಸಂಚಾರ ವ್ಯವಸ್ಥೆ ಹೊಣೆಗಾರಿಕೆ ಇರುವ ಸಿಬ್ಬಂದಿಗೆ ತರಬೇತಿ ಪೂರ್ಣಗೊಳ್ಳಲಿದೆ ಎಂದವರು ತಿಳಿಸಿದರು. 

               ವಿಶೇಷ ಅಂಚೆ ಮತದಾನ: 

       ಕೋವಿಡ್ ಪಾಸಿಟಿವ್ ಆದವರಿಗೆ ಮತ್ತು ಕ್ವಾರೆಂಟೈನ್ ಪ್ರವೇಶಿಸುವ ಮಂದಿಗಾಗಿ ಈ ಬಾರಿ ವಿಶೇಷ ಅಂಚೆ ಮತದಾನ ಸೌಲಭ್ಯ ಏರ್ಪಡಿಸಲಾಗಿದ್ದು, ಈ ಸಂಬಂಧ ಚಟುವಟಿಕೆಗಳು ಪ್ರಗತಿಯಲ್ಲಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ30 ಮಮದಿ ವಿಶೇಷ ಪೆÇೀಲಿಂಗ್ ಅಧಿಕಾರಿಗಳನ್ನು, 30 ಪೆÇೀಲಿಂಗ್ ಸಹಾಯಕರನ್ನು ನೇಮಿಸಲಾಗಿದೆ. ಇವರು ಬ್ಲೋಕ್/ನಗರಸಭೆ ವಿಂಗಡಣೆಯೊಂದಿಗೆ ಕರ್ತವ್ಯದಲ್ಲಿದ್ದಾರೆ. 

              ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries