ನವದೆಹಲಿ: ಕೊರೊನಾವೈರಸ್ ಮುಂದಿನ 10 ವರ್ಷಗಳ ಕಾಲ ನಮ್ಮ ಜತೆಯೇ ಇರಲಿದೆ ಎಂದು ಲಸಿಕೆ ತಯಾರಕರು ಹೇಳಿದ್ದಾರೆ. ಕೊರೊನಾ ಸೋಂಕು ಬೇರೆಯವರಿಗೆ ಹರಡಬಾರದೆಂದರೆ ವಿಶ್ವದ ಕನಿಷ್ಠ 60-70 ಮಂದಿಗಾದರೂ ಲಸಿಕೆ ದೊರೆಯಬೇಕು.
ವಿಶ್ವದಲ್ಲೇ ಕೊರೊನಾ ಲಸಿಕೆಗೆ ಮೊದಲ ಅನುಮೋದನೆ ಪಡೆದ ಲಸಿಕೆ ತಯಾರಕರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಬಯೋ ಎನ್‌ಟೆಕ್ ಮುಖ್ಯ ಕಾರ್ಯನಿರ್ವಾಹಕ ಉಗುರ್ ಸಾಹಿನ್ ಮಾತನಾಡಿ, ವೈರಸ್ ಸುಮಾರು 10 ವರ್ಷಗಳ ಕಾಲ ನಮ್ಮೊಂದಿಗೆ ಇರಲಿದೆ ಎಂದಿದ್ದಾರೆ.
ಜಗತ್ತಿಗೆ ಸಾಮಾನ್ಯ ಎಂಬ ಒಂದು ವ್ಯಾಖ್ಯಾನ ಬೇಕಾಗಿದೆ, ಕೊರೊನಾ ಸೋಂಕು ಯಾವಾಗ ಬೇಕಾದರೂ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಗತ್ತಿನ 60,70ರಷ್ಟು ಕೊರೊನಾ ಸೋಂಕಿತರಿಗೆ ಲಸಿಕೆ ಸಿಕ್ಕಾಗ ಮಾತ್ರ ಕೊರೊನಾ ಸೋಂಕು ಕಡಿಮೆಯಾಗುತ್ತದೆ. ವಿಶ್ವದ ಅಷ್ಟು ಮಂದಿಗೆ ಲಸಿಕೆ ಸಿಗುವಷ್ಟರಲ್ಲಿ ಹತ್ತು ವರ್ಷ ಕಳೆಯಲಿದೆ ಎಂದು ಹೇಳಿದರು.
ಹಾಗೆಯೇ ಹೊಸ ಕೊರೊನಾ ಲಸಿಕೆಯಿಂದ ಅಲರ್ಜಿ ಸೇರಿದಂತೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಬ್ರಿಟನ್‌ನಲ್ಲಿ ಹೊಸ ರೂಪಾಂತರಿತ ಕೊರೊನಾವೈರಸ್ ಪತ್ತೆಯಾಗಿದೆ, ಸಾಮಾನ್ಯ ವೈರಸ್‌ಗಿಂತ ಶೇ.70ರಷ್ಟು ಬೇಗ ವೈರಸ್ ಹರಡಲಿದೆ ಎಂದು ಹೇಳಲಾಗಿದ್ದು, ಭಾರತ, ದಕ್ಷಿಣ ಕೊರಿಯಾ ಸೇರಿ ಹಲವು ದೇಶಗಳಲ್ಲಿ ಈ ಕೊರೊನಾ ವೈರಸ್‌ನ ಹೊಸ ಪ್ರಭೇದ ಪತ್ತೆಯಾಗಿದೆ.