ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಇಂದು ಮಂಗಳವಾರ ಕರೆ ನೀಡಿರುವ ಭಾರತ್ ಬಂದ್ ಗೆ ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ನೈತಿಕ ಬೆಂಬಲ ಘೋಷಿಸಿದೆ.
ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಇಳಿಯುವುದಿಲ್ಲ ಮತ್ತು ಕೆಲಸದಿಂದ ದೂರವಿರುವುದಿಲ್ಲ. ಆದರೆ ರೈತರ ಆಂದೋಲನವನ್ನು ಬೆಂಬಲಿಸುತ್ತವೆ ಎಂದು ಹಿಂದ್ ಮಜ್ದೂರ್ ಸಭಾ ಪ್ರಧಾನ ಕಾರ್ಯದರ್ಶಿ ಹರ್ಭಜನ್ ಸಿಂಗ್ ಸಿಧು ಅವರು ತಿಳಿಸಿದ್ದಾರೆ.
ಕಾರ್ಮಿಕರು ಇಂದು ಭಾರತ್ ಬಂದ್ ಬೆಂಬಲಿಸಿ ಕರ್ತವ್ಯದಲ್ಲಿರುವಾಗ ಕಪ್ಪು ಪಟ್ಟಿಗಳನ್ನು ಧರಿಸಲಿದ್ದಾರೆ ಮತ್ತು ಕೆಲಸದ ಸಮಯದ ನಂತರ ಅಥವಾ ಮೊದಲು ವೇದಿಕೆಯು ಪ್ರತಿಭಟನೆ ಮತ್ತು ರ್ಯಾಲಿಗಳನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಹಿಂದ್ ಮಜ್ದೂರ್ ಸಭಾ, ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ, ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್, ಟ್ರೇಡ್ ಯೂನಿಯನ್ ಕೋಆರ್ಡಿನೇಷನ್ ಸೆಂಟರ್, ಸ್ವಯಂ ಉದ್ಯೋಗಿ ಮಹಿಳಾ ಸಂಘ, ಅಖಿಲ ಭಾರತ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್, ಲೇಬರ್ ಪ್ರೋಗ್ರೆಸ್ಸಿವ್ ಫೆಡರೇಶನ್ ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ.