HEALTH TIPS

ಸ್ಥಳೀಯಾಡಳಿತ ಚುನಾವಣೆ- ಜಿಲ್ಲೆಯಲ್ಲಿ 127 ಸೂಕ್ಷ್ಮ ಬೂತ್ ಗಳು! ಅಧಿಕಾರಿಗಳಿಂದ ಅವಲೋಕನ

           

        ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ 127 ಸಮಸ್ಯಾತ್ಮಕ ಅಥವಾ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ವಿವಿಧ ಅಧಿಕಾರಿಗಳೊಂದಿಗೆ (ಉಪ-ಜಿಲ್ಲಾಧಿಕಾರಿ, ಆರ್‍ಡಿಒ ಮತ್ತು ಚುನಾವಣಾ ಇತರ ಅಧಿಕಾರಿಗಳು) ತಂಡ ಸಂದರ್ಶನ ನಡೆಸಿ ಪರಿಶೀಲನೆ ನಡೆಸಿದೆ.

             ಸೂಕ್ಷ್ಮ ಮತಗಟ್ಟೆಗಳು ಯಾವುದು?:

    ಕಳೆದ ಚುನಾವಣೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮತಗಳು ಚಲಾವಣೆಗೊಂಡು, ಅದರಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಶೇಕಡಾ 75 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುವುದು ಮತ್ತು ಹತ್ತು ಅಥವಾ ಅದಕ್ಕಿಂತ ಕಡಿಮೆ ಮತಗಳಿಂದ ಗೆದ್ದ ಬೂತ್‍ಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಜೊತೆಗೆ ಈ ಹಿಂದಿನ ವರ್ಷಗಳಲ್ಲಿ ಹಿಂಸಾಚಾರ ವರದಿಯಾಗಿರುವ ಬೂತ್‍ಗಳೂ ಸೂಕ್ಷ್ಮ ಮತಗಟ್ಟೆಗಳಾಗಿವೆ. ಜಿಲ್ಲೆಯಲ್ಲಿ 84 ನಿರ್ಣಾಯಕ ಬೂತ್‍ಗಳಿವೆ. ಈ ಪೈಕಿ 78 ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಆರು ಪುರಸಭೆಗಳಲ್ಲಿವೆ. 43 ಸೂಕ್ಷ್ಮ  ಬೂತ್‍ಗಳಿವೆ. ತಪಾಸಣೆಯ ಬಳಿಕ  ಭದ್ರತೆಯನ್ನು ಬಿಗಿಗೊಳಿಸುವುದು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಪೆÇಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಂಜೇಶ್ವರ ಬ್ಲಾಕ್‍ನಿಂದ ಮಂಗಳವಾರದಿಂದ ತಪಾಸಣೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              ತೇಜೋವಧೆಗೆ ಕಠಿಣ ಕ್ರಮ: 

    ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ಅಭ್ಯರ್ಥಿಗಳು ಮತ್ತು ಇತರರ ವಿರುದ್ಧ ಮಾನಹಾನಿ ಮಾಡುತ್ತಿರುವವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಭಾಸ್ಕರನ್ ಮಾಹಿತಿ ನೀಡಿರುವರು. ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಇಂತಹ ಪ್ರಚಾರಗಳು ಅಪರಾಧ. ಪ್ರಚಾರವು ವಿರೋಧ ಪಕ್ಷದ ರಾಜಕೀಯ ಪಕ್ಷಗಳ ನಾಯಕರನ್ನು ವೈಯಕ್ತಿಕವಾಗಿ ವೈಭವೀಕರಿಸಬಾರದು ಮತ್ತು ಅವರ ಗೌಪ್ಯತೆಯನ್ನು ಉಲ್ಲಂಘಿಸಬಾರದು. ಇತರ ಪಕ್ಷ ಅಥವಾ ಅವರ ಕಾರ್ಯಕರ್ತರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಬೇಡಿ. ಇತರ ಪಕ್ಷಗಳ ಟೀಕೆಗಳನ್ನು ಅವರ ನೀತಿ ಕಾರ್ಯಸೂಚಿಗೆ ಸೀಮಿತಗೊಳಿಸಬೇಕು ಎಂದು ಆಯುಕ್ತರು ಹೇಳಿದರು.

            ಕನ್ನಡದಲ್ಲೂ ಬ್ಯಾಲೆಟ್ ಪೇಪರ್:

    ಸ್ಥಳೀಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಭಾಷಾ ಅಲ್ಪಸಂಖ್ಯಾತರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಮತದಾನ ಯಂತ್ರಗಳಲ್ಲಿ ಅಂಟಿಸಲಾದ ಮತಪತ್ರಗಳು ಮತ್ತು ಮತಗಟ್ಟೆ ವಿವರಗಳು  ತಮಿಳು ಮತ್ತು ಕನ್ನಡದಲ್ಲಿ ಮುದ್ರಿಸಬೇಕೆಂದು ರಾಜ್ಯ ಚುನಾವಣಾ ಆಯುಕ್ತ ವಿ ಭಾಸ್ಕರನ್ ನಿರ್ದೇಶನ ನೀಡಿದ್ದಾರೆ. ಕಾಸರಗೋಡು ಜಿಲ್ಲೆಯ ನಾಲ್ಕು ಬ್ಲಾಕ್ ಪಂಚಾಯಿತಿಗಳ ಅಡಿಯಲ್ಲಿ 18 ಗ್ರಾಮ ಪಂಚಾಯಿತಿಳು, 228 ವಾರ್ಡ್‍ಗಳು, ಮತ್ತು ಕಾಸರಗೋಡು ನಗರ ಸಭೆಯ 38 ವಾರ್ಡ್‍ಗಳಲ್ಲಿ ಮಲಯಾಳಂ ಜೊತೆಗೆ ಕನ್ನಡದಲ್ಲಿ ಬ್ಯಾಲೆಟ್ ಪೇಪರ್ ಮತ್ತು ಮತಗಟ್ಟೆ ವಿವರ ಮುದ್ರಿಸಲಾಗುವುದು. ವಾರ್ಡ್‍ಗಳ ವಿವರಗಳು ರಾಜ್ಯ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ  ಲಭ್ಯವಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries