ಕಾಸರಗೋಡು: ರಾಷ್ಟ್ರೀಯ ಬಾಲವಿಜ್ಞಾನ ಕಾಂಗ್ರೆಸ್ ಜಿಲ್ಲಾ ಮಟ್ಟದ ಸ್ಪರ್ಧೆ ಜ.12ರಂದು ಜರುಗಲಿದೆ.
ಅಂದು ಆನ್ ಲೈನ್ ಮೂಲಕ ನಡೆಯುವ 28ನೇ ರಾಷ್ಟ್ರೀಯ ಬಾಲವಿಜ್ಞಾನ ಕಾಂಗ್ರೆಸ್ ಜಿಲ್ಲಾ ಮಟ್ಟದ ಸ್ಪರ್ಧೆ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಜಿಲ್ಲಾ ಶಿಕ್ಷಣಾಧಿಕಾರಿ ಕೆ.ವಿ.ಪುಷ್ಪಾ ಮುಖ್ಯ ಅತಿಥಿಯಾಗಿರುವರು. ರಾಜ್ಯ ವಿಜ್ಞಾನ ತಂತ್ರಜ್ಞಾನ ಪರಿಸರ ಇಲಾಖೆ ವಿಜ್ಞಾನಿ, ರಾಷ್ಟ್ರೀಯ ಬಾಲವಿಜ್ಞಾನ ಕಾಂಗ್ರೆಸ್ ರಾಜ್ಯ ಮಟ್ಟದ ನೋಡೆಲ್ ಅಧಿಕಾರಿ ಡಾ.ಪಿ.ಹರಿನಾರಾಯಣನ್ ನಿರೀಕ್ಷಕರಾಗಿರುವರು. ಜ್ಯೂನಿಯರ್/ಸೀನಿಯರ್ ವಿಭಾಗಗಳಲ್ಲಿ ಎಷ್ಟು ಮಂದಿ ಬೇಕಿದ್ದರೂ ಭಾಗವಹಿಸಬಹುದು. ಒಂದು ತಂಡದಲ್ಲಿ ಇಬ್ಬರು ಮಾತ್ರ ಇರುವರು. ಕೋವಿಡ್ ಹಿನ್ನೆಲೆಯಲ್ಲಿ ಒಬ್ಬರು ಮಾತ್ರ ಬೇಕಿದ್ದರೂ ಬಾಗವಹಿಸಬಹುದು.
ದೈನಂದಿನ ಬದುಕಿನಲ್ಲಿ ಅನುಭವಿಸುವ ವಿಚಾರಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಿ ನಿಗಾ ಮನೋಭಾವದೊಂದಿಗೆ ಸ್ವಂತ ನೆಲೆಯಲ್ಲಿ ವರದಿ ಸಿದ್ಧಪಡಿಸಿ ಲೋಗ್ ಪುಸ್ತಕ, 4 ಚಾರ್ಟ್ ಇತ್ಯಾದಿ ಸಹಿತ ಆನ್ ಲೈನ್ ನಲ್ಲಿ ಪ್ರಸ್ತುತಪಡಿಸಬಹುದು. 8 ನಿಮಿಷ ಅವಧಿಯಲ್ಲಿ ಪ್ರಸ್ತುತಿ, 2 ನಿಮಿಷ ಸಂವಾದ ಎಂಬ ರೀತಿ ಆಯ್ಕೆ ನಡೆಯುವ ಪಾನೆಲ್ ನ ಮುಂದೆ ಪ್ರಸ್ತುತಪಡಿಸಬೇಕು. ಮುಂಗಡವಾಗಿ ರೆಕಾರ್ಡ್ ನಡೆಸಿ ಪ್ರಸ್ತುತಪಡಿಸಲೂ ಅವಕಶಗಳಿವೆ. ಒಂದು ಶಾಲೆಯಿಂದ ಎಷ್ಟು ತಂಡಗಳೂ ಬಾಗವಹಿಸಬಹುದು. ವಿಶೇಷಚೇತನರಿಗೆ ವಯೋಮಾನದ ಮಿತಿಯಿಲ್ಲ.
ನೋಂದಣಿ ಪ್ರಕ್ರಿಯೆಗಳು 2021 ಜನವರಿ 5ರ ವರಗೆ ಮಾತ್ರ ಇರುವುದು. ಭರ್ತಿಗೊಳಿಸಿದ ಎ ಫಾರಂ, ಇಂಗ್ಲೀಷ್ ನಲ್ಲಿ ಸಿದ್ಧಪಡಿಸಿದ ಎಬ್ ಸ್ಟ್ರಾಕ್ಟ್. ಪ್ರಾಜೆಕ್ಟ್ ವರದಿ ಇತ್ಯಾದಿ ಪಿ.ಡಿ.ಎಫ್.ರೂಪದಲ್ಲಿ 2021 ಜ.5ರ ಮುಂಚಿತವಾಗಿ ಪೆÇ್ರ.ವಿ.ಗೋಪಿನಾಥನ್, ರಾಷ್ಟ್ರೀಯ ಬಾಲವಿಜ್ಞಾನ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಂಚಾಲಕ ಅವರಿಗೆ ಈ ಮೇಲ್ : ಮೂಲಕ ತಕ್ಷಣ ಕಳುಹಿಸಬೇಕು. ಇಂಗ್ಲೀಷ್ ನಲ್ಲಿ ಸಿದ್ಧಪಡಿಸಿರುವ ಎಬ್ ಸ್ಟ್ರಾಕ್ಟ್ ಗುಣಮಟ್ಟದ ಪ್ರಾಜೆಕ್ಟ್ ಗಳನ್ನು ಮಾತ್ರ ಆಯ್ದು ಪ್ರಸ್ತುತಗೊಳಿಸಲು ಅನುಮತಿ ಇರುವುದು. ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಸಾಲೆಯ ಶಿಕ್ಷಕ ಪಿ.ಎಸ್.ಸಂತೋಷ್ ಕುಮಾರ್ ಅಕಾಡೆಮಿಕ್ ಸಂಚಾಲಕರಾಗಿದ್ದಾರೆ. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 9446281854.