ತಿರುವನಂತಪುರ: 2020 ರ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಫೈನಾನ್ಷಿಯಲ್ ಟೈಮ್ಸ್ ಪಟ್ಟಿಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸ್ಥಾನ ಪಡೆದಿದ್ದಾರೆ. ಕೆ.ಕೆ ಶೈಲಾಜಾ ಅವರು ಯುಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಅವರೊಂದಿಗೆ ಈ ಸ್ಥಾನ ಪಡೆದಿದ್ದಾರೆ.
ಫೈನಾನ್ಷಿಯಲ್ ಟೈಮ್ಸ್ ಪ್ರತಿವರ್ಷ ಡಿಸೆಂಬರ್‍ನಲ್ಲಿ ಪ್ರಕಟಿಸುವ ಪಟ್ಟಿ ಇದಾಗಿದೆ. ಪ್ರಸ್ತುತ ಕೋವಿಡ್ ಸಂಕಷ್ಟದ ವರ್ಷದಲ್ಲಿ ರಾಜಕೀಯ, ಬರವಣಿಗೆ ಮತ್ತು ವಿಜ್ಞಾನದಂತಹ ವಿವಿಧ ಕ್ಷೇತ್ರಗಳಲ್ಲಿ ಪ್ರಬಲ ಕೊಡುಗೆಗಳನ್ನು ನೀಡಿದ ಮಹಿಳೆಯರನ್ನು ಗುರುತಿಸಲಾಗುತ್ತದೆ. ಈ ವರ್ಷ ಅಂತಹ ಖ್ಯಾತಿಯನ್ನು ಗಳಿಸಿದ ಮಹಿಳೆಯರನ್ನು ಕೋವಿಡ್ ಹಿನ್ನೆಲೆಯಲ್ಲಿ ಭಾರೀ ಕುತೂಹಲದಿಂದ ಗುರುತಿಸಿ ಈ ಮೂಲಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಬಯೋಟೆಕ್ ಮುಖ್ಯ ವೈದ್ಯಾಧಿಕಾರಿ ಓಸ್ಲೆಮ್ ತುರೆಸಿ, ಬೆಲರೂಸಿಯನ್ ರಾಜಕೀಯ ಮುಖಂಡ ಸ್ವೆಟ್ಲೆನಾ ಟಿಖಾನೋವ್ಸ್ಕಯಾ, ತೈವಾನೀಸ್ ಅಧ್ಯಕ್ಷ ತ್ಸೈ ಇಂಗ್-ವೆನ್, ದಿವಂಗತ ಯುಎಸ್ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರುತ್ ಬೇಡರ್ ಗಿನ್ಸ್ಬರ್ಗ್, ಅಮೆರಿಕದ ರಾಜಕೀಯ ನಾಯಕ ಅಲೆಕ್ಸಾಂಡ್ರಿಯಾ ಒಕಾಸಿಯೊ ಮತ್ತು ಸಂಗೀತಗಾರ ಟೇಲರ್ ಸ್ವಿಫ್ಟ್ ಸೇರಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕೇರಳದ ಆರೋಗ್ಯ ನಿರ್ವಹಣೆಯು ಗಮನ ಸೆಳೆದಿದ್ದರಿಂದ ಜಗತ್ತು ಕೆ.ಕೆ.ಶೈಲಜಾ ಅವರನ್ನು ತೀವ್ರವಾಗಿ ಗಮನಿಸಿದೆ. ಫೈನಾನ್ಷಿಯಲ್ ಟೈಮ್ಸ್ನಂತೆಯೇ ಹಲವಾರು ಸಾಧನೆಗಳನ್ನು ಈ ವರ್ಷ ಸಚಿವೆಯನ್ನು ಅರಸಿ ಬಂದಿದೆ. ಇದರಲ್ಲಿ ವೋಗ್ ಇಂಡಿಯಾದ ವರ್ಷದ ಮಹಿಳೆ ಪ್ರಶಸ್ತಿ ಮತ್ತು ಯುಎನ್ ಸಾರ್ವಜನಿಕ ಸೇವಾ ದಿನದಂದು ಪ್ಯಾನಲಿಸ್ಟ್ ಆಗಲು ಆಹ್ವಾನ ಪ್ರಮುಖವಾದವುಗಳಾಗಿವೆ.