ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ವಿದ್ಯುನ್ಮಾನ ಮತಯಂತ್ರಗಳ ಕಮಿಷನಿಂಗ್ ನಡೆಸಲಾಯಿತು.
ಬ್ಲಾಕ್ ಪಂಚಾಯತ್, ನಗರಸಭೆ ತಳಹದಿಯಲ್ಲಿ ಜಿಲ್ಲೆಯ 8 ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳ, ಕಾಸರಗೋಡು ನಗರಸಭೆಯ ಮತಯಂತ್ರಗಳ ಕಮೀಷನಿಂಗ್ ಪ್ರಕ್ರಿಯೆಗಳು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಕಾಞಂಗಾಡ್ ನಗರಸಭೆಗಳ ಮತಯಂತ್ರಗಳ ಕಮೀಷನಿಂಗ್ ಪ್ರಕ್ರಿಯೆ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ, ಕಾಞಂಗಾಡ್ ಬ್ಲೋಕ್ ನ ಮತಯಂತ್ರಗಳ ಕಮೀಷನಿಂಗ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲೂ, ಮಂಜೇಶ್ವರ ಬ್ಲೋಕ್ ನ ಮತಯಂತ್ರಗಳ ಕಮೀಷನಿಂಗ್ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ, ಕಾರಡ್ಕ ಬ್ಲೋಕ್ ನ ಮತಯಂತ್ರಗಳ ಕಮೀಷನಿಂಗ್ ಬೋವಿಕ್ಕಾನ ಬಿ.ಆರ್.ಎಚ್.ಎಸ್.ನಲ್ಲೂ, ಪರಪ್ಪ ಬ್ಲೋಕ್ ನ ಮತಯಂತ್ರಗಳ ಕಮೀಷನಿಂಗ್ ಪರಪ್ಪ ಸರಕಾರಿ ಪ್ರೌಢಶಾಲೆಯಲ್ಲೂ, ನೀಲೇಶ್ವರ ಬ್ಲಾಕ್ ನ ಮತಯಂತ್ರಗಳ ಕಮೀಷನಿಂಗ್ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲೂ, ನೀಲೇಶ್ವರ ನಗರಸಭೆಯ ಮತಯಂತ್ರಗಳ ಕಮೀಷನಿಂಗ್ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಜರುಗಿತು.
ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಕ್ರಿಯೆ ಆರಂಭಗೊಡಿತ್ತು. ಸ್ಟ್ರಾಂಗ್ ರೂಂ ನಲ್ಲಿ ದಾಸ್ತಾನು ಇರಿಸಿದ್ದ ಮತಯಂತ್ರಗಳನ್ನು ಪೆÇಲೀಸ್ ಬೆಂಗಾವಲಿನೊಂದಿಗೆ ಪ್ರತಿ ಪಂಚಾಯತ್ ಗಳ ನಿಗದಿತ ಕೊಠಡಿಗಳಿಗೆ ತಲಪಿಸಲಾಗಿತ್ತು. ರಿಟನಿರ್ಂಗ್ ಆಫೀಸರ್, ಸಹಾಯಕ ರಿಟನಿರ್ಂಗ್ ಆಫೀಸರ್, ಅಭ್ಯರ್ಥಿ ಯಾ ಪ್ರತಿನಿಧಿಗಳ ಸಮಕ್ಷದಲ್ಲಿ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ಲಗತ್ತಿಸಲಾಯಿತು. ತದನಂತರ ಸೀಲ್ ಮಾಡಲಾಗಿತ್ತು. ನಂತರ ಮತ್ತೆ ಮತಯಂತ್ರಗಳನ್ನು ಸ್ಟ್ರಾಂಗ್ ರೂಂ ಗಳಿಗೆ ಮರಳಿಸಲಾಗಿತ್ತು. 13ರಂದು ಬೆಳಗ್ಗೆ ಪೆÇೀಲಿಂಗ್ ಸಾಮಾಗ್ರಿಗಳನ್ನು ಸಿಬ್ಬಂದಿಗೆ ಹಸ್ತಾಂತರಿಸುವ ವೇಳೆ ಈ ಸ್ಟ್ರಾಂಗ್ ರೂಂ ತೆರೆಯಲಾಗುವುದು. ರಿಟನಿರ್ಂಗ್ ಆಫೀಸರ್, ಅಭ್ಯರ್ಥಿಗಳು ಮೊದಲಾದವರ ಸಮಕ್ಷದಲ್ಲಿ ಇದು ನಡೆಯಲಿದೆ.
ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜರುಗಿದ ಪ್ರಕ್ರಿಯೆಗಳಿಗೆ ಬ್ಲೋಕ್ ರಿಟನಿರ್ಂಗ್ ಆಫೀಸರ್ ವಿ.ಜೆ.ಷಂಸುದ್ದೀನ್ ನೇತೃತ್ವ ವಹಿಸಿದ್ದರು. ಪಂಚಾಯತ್ ಗಳ , ನಗರಸಭೆಗಳ ರಿಟನಿರ್ಂಗ್ ಆಫೀಸರ್ ಗಳು ಪ್ರಕ್ರಿಯೆಗಳಿಗೆ ನೇತೃತ್ವ ನೀಡಿದ್ದರು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಸಾಲೆಯಲ್ಲಿ ನಡೆದ ಪ್ರಕ್ರಿಯೆಗೆ ಮಂಜೇಶ್ವರ ಬ್ಲೋಕ್ ರಿಟನಿರ್ಂಗ್ ಆಫೀಸರ್ ಬೆವಿನ್ ಜಾನ್ ವರ್ಗೀಸ್ ನೇತೃತ್ವ ನೀಡಿದರು.