ತಿರುವನಂತಪುರ: ರಾಜ್ಯದ ಇನ್ನೂ 13 ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟದ ಅನುಮೋದನೆ ದೊರೆತಿದೆ. 13 ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟ ಖಾತರಿ ಮಾನದಂಡ (ಎನ್‍ಕ್ಯೂಎಎಸ್) ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ. ಕೋವಿಡ್ ತಡೆಗಟ್ಟುವ ಚಟುವಟಿಕೆಗಳಲ್ಲಿ ಗುಣಮಟ್ಟದ ಮಾನ್ಯತೆ ಪಡೆಯುವ ಆಸ್ಪತ್ರೆಗಳು ಆರೋಗ್ಯ ಕ್ಷೇತ್ರಕ್ಕೆ ವರದಾನವಾಗಿದೆ.
ಕೊಟ್ಟಾಯಂ ಪೆರುನ್ನಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಸ್ಕೋರ್ 94.34), ಮಲಪ್ಪುರಂ ಮೊರಾಯೂರ್ ಕುಟುಂಬ ಆರೋಗ್ಯ ಕೇಂದ್ರ (92.73), ಕೋಝಿಕ್ಕೋಡ್ ಮೇಪಾಯೂರ್ ಕುಟುಂಬ ಆರೋಗ್ಯ ಕೇಂದ್ರ (92.16), ಕಣ್ಣೂರು ಎರಾಮ್ ಕುಟ್ಟೂರು ಕುಟುಂಬ ಆರೋಗ್ಯ ಕೇಂದ್ರ (92.6) ಮತ್ತು ಕಣ್ಣೂರು ಕಲ್ಯಾಸ್ಸೇರಿ ಕುಟುಂಬ ಆರೋಗ್ಯ ಕೇಂದ್ರ (91.8) ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದು ಪ್ರಶಸ್ತಿಗೆ ಆಯ್ಕೆಯಾಗಿದೆ.
ಇದಲ್ಲದೆ, ತ್ರಿಶೂರ್ ವೆಲ್ಲೂರು ಕುಟುಂಬ ಆರೋಗ್ಯ ಕೇಂದ್ರ (95), ಕಣ್ಣೂರು ಚೆರುಕುನ್ನುತ್ತರ (88), ಕಣ್ಣೂರು ಅರಲಂ ಕೃಷಿ ಕುಟುಂಬ ಆರೋಗ್ಯ ಕೇಂದ್ರ (84), ಕಣ್ಣೂರು ಉದಯಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ (94), ಪತ್ತನಂತಿಟ್ಟು ಚೆನ್ನಿರಕರ ಕುಟುಂಬ ಆರೋಗ್ಯ ಕೇಂದ್ರ (87.5), ತಿರುವನಂತುಲಂ ಕುಟುಂಬ (ಆರೋಗ್ಯ) ಪ್ರಾಥಮಿಕ ಆರೋಗ್ಯ ಕೇಂದ್ರ (90) ಮತ್ತು ಎರ್ನಾಕುಳಂ ಮನೀತ್ ಪ್ರಾಥಮಿಕ ಆರೋಗ್ಯ ಕೇಂದ್ರ (95) ಕೂಡ ಇತ್ತೀಚೆಗೆ ಎನ್‍ಕ್ಯೂಎಎಸ್ ಪ್ರಶಸ್ತಿಗಳನ್ನು ಪಡೆದಿದ್ದವು.
ವರದಿಗಳ ಪ್ರಕಾರ, ಕೇರಳ ದೇಶದ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗ್ರ 12 ಸ್ಥಾನವನ್ನು ಉಳಿಸಿಕೊಂಡಿದೆ. ಭಾರತದ ಒಟ್ಟು 5190 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ 36 ಮಾತ್ರ ಎನ್‍ಕ್ಯೂಎಎಸ್ ಮಾನ್ಯತೆ ಲಭಿಸಿದೆ. ಅವರಲ್ಲಿ 7 ಕೇರಳದಲ್ಲಿವೆ. 21 ನಗರ ಪ್ರಾಥಮಿಕ ಕೇಂದ್ರಗಳು ಪ್ರಶಸ್ತಿಗೆ ಅರ್ಜಿಸಲ್ಲಿಸಿದ್ದವು. ಈ ಪೈಕಿ 7 ಸಂಸ್ಥೆಗಳಿಗೆ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲು ಅನುಮೋದನೆ ನೀಡಲಾಯಿತು.