ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ 1409 ಮತಗಟ್ಟೆಗಳು ಸಿದ್ಧಗೊಂಡಿದ್ದು, 8527 ಸಿಬ್ಬಂದಿ ಈ ಕುರಿತು ಕರ್ತವ್ಯದ ಹೊಣೆಯಲ್ಲಿದ್ದಾರೆ.
ಇವರಲ್ಲಿ 1482 ಮಂದಿ ರಿಸರ್ವ್ ಡ್ ಸಿಬ್ಬಂದಿ ಇದ್ದಾರೆ. ಚುನಾವಣೆಯ ಹೊಣೆಯಲ್ಲಿರುವವರಲ್ಲಿ 4794 ಮಂದಿ ಮಹಿಳೆಯರು ಮತ್ತು 3733 ಮಂದಿ ಪುರುಷರು.
1709 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳು:
ಕಾಸರಗೊಡು ಜಿಲ್ಲೆಯಲ್ಲಿ 1709 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳಿದ್ದಾರೆ. ಇವರಲ್ಲಿ 803 ಮಂದಿ ಪುರುಷರು, 606 ಮಂದಿ ಮಹಿಳೆಯರು. ಇವರಲ್ಲದೆ 300 ಮಂದಿ ರಿಸರ್ವ್ ಡ್ ಸಿಬ್ಬಂದಿ ಇದ್ದಾರೆ.
1409 ಮಂದಿ ಫಸ್ಟ್ ಪೋಲಿಂಗ್ ಅಧಿಕಾರಿಗಳು:
ಕಾಸರಗೋಡು ಜಿಲ್ಲೆಯಲ್ಲಿ 1409 ಮಂದಿ ಫಸ್ಟ್ ಪೋಲಿಂಗ್ ಅಧಿಕಾರಿಗಳಿದ್ದಾರೆ. ಇವರಲ್ಲಿ 895 ಮಂದಿ ಪುರುಷರು, 514 ಮಂದಿ ಮಹಿಳೆಯರು. ಇವರಲ್ಲಿ 300 ಮಂದಿ ರಿಸರ್ವ್ ಡ್ ಸಿಬ್ಬಂದಿ ಇದ್ದಾರೆ.
2818 ಮಂದಿ ಪೆÇೀಲಿಂಗ್ ಅಧಿಕಾರಿಗಳು:
ಕಾಸರಗೋಡು ಜಿಲ್ಲೆಯಲ್ಲಿ 2818 ಮಂದಿ ಪೆÇೀಲಿಂಗ್ ಅಧಿಕಾರಿಗಳಿದ್ದಾರೆ. ಇವರಲ್ಲಿ 1264 ಮಂದಿ ಪುರುಷರು, 1554 ಮಂದಿ ಮಹಿಳೆಯರು ಇದ್ದಾರೆ. ಇವರಲ್ಲದೆ 582 ರಿಸರ್ವ್ ಡ್ ಸಿಬ್ಬಂದಿ ಇದ್ದಾರೆ. 1409 ಮಂದಿ ಪೆÇೀಲಿಂಗ್ ಸಹಾಯಕರಿದ್ದಾರೆ. ಇವರಲ್ಲಿ 265 ಮಂದಿ ಪುರುಷರು, 1144 ಮಂದಿ ಮಹಿಳೆಯರು ಇರುವರು. ಇವರಲ್ಲದೆ 300 ಮಂದಿ ರಿಸರ್ವ್ ಡ್ ಸಿಬ್ಬಂದಿ ಇದ್ದಾರೆ.
ಸಾಮಾಗ್ರಿಗಳ ವಿತರಣೆಗೆ 8 ಕೇಂದ್ರಗಳು:
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತಗಟ್ಟೆಗಳಿಗೆ ಪೂರೈಕೆ ನಡೆಸುವ ಸಾಮಾಗ್ರಿಗಳ ವಿತರಣೆಗಾಗಿ ಕಾಸರಗೋಡು ಜಿಲ್ಲೆಯಲ್ಲಿ 8 ಕೇಂದ್ರಗಳು ಸಿದ್ಧಗೊಂಡಿವೆ. ಡಿ.13ರಂದು ಬೆಳಗ್ಗೆ 8 ರಿಂದ ಆಯಾ ಕೇಂದ್ರಗಳಿಂದ ಪೋಲಿಂಗ್ ಸಾಮಾಗ್ರಿಗಳ ವಿತರಣೆ ನಡೆಸಲಾಗುವುದು.
ಮಂಜೇಶ್ವರ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳ ಮತಗಟ್ಟೆಗಳಿಗೆ ಸಾಮಾಗ್ರಿಗಳ ವಿತರಣಭೆ ಕೇಂದ್ರ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವುದು. ಕಾಸರಗೋಡು ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಗಳಿಗೆ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿಯ ಮತಗಟ್ಟೆಗಳಿಗೆ ಸಾಮಾಗ್ರಿ ವಿತರಣೆ ಕೇಂದ್ರ ಕಾಸರಗೋಡು ಸರಕಾರಿ ಕಾಲೇಜಿನಲ್ಲಿರುವುದು. ಕಾರಡ್ಕ ಬ್ಲೋಕ್ ವ್ಯಾಪ್ತಿಯ ಪಂಚಾಯತ್ ಗಳಿಗೆ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಕೇಂದ್ರ ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್.ಎಸ್.ನಲ್ಲಿರುವುದು.
ಕಾಞಂಗಾಡ್ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಗಳ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಕೇಂದ್ರ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವುದು. ಕಾಞಂಗಾಡ್ ನಗರಸಭೆ ವ್ಯಾಪ್ತಿಯ ಮತಗಟ್ಟೆಗಳ ಸಾಮಾಗ್ರಿ ವಿತರಣೆ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವುದು. ನೀಲೇಶ್ವರ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಮತಗಟ್ಟೆಗಳ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲಲಿರುವುದು. ನೀಲೇಶ್ವರ ನಗರಸಭೆ ವ್ಯಾಪ್ತಿಯ ಮತಗಟ್ಟೆಗಳ ಸಾಮಾಗ್ರಿಗಳ ವಿತರಣೆ ಕೇಂದ್ರ ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವುದು. ಪರಪ್ಪ ಬ್ಲೋಕ್ ವ್ಯಾಪ್ತಿಯ ಪಂಚಾಯತ್ ಗಳ ಮತಗಟ್ಟೆಗಳ ಸಾಮಾಗ್ರಿ ವಿತರಣೆ ಕೇಂದ್ರ ಪರಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಇರುವುದು.