ತಿರುವನಂತಪುರ: ಮುಂದಿನ ವರ್ಷ ಜನವರಿ 15 ರಂದು ರಾಜ್ಯ ಬಜೆಟ್ ಅಧಿವೇಶನ ನಡೆಯಲಿದೆ. ಇದು ಪಿಣರಾಯಿ ವಿಜಯನ್ ನೇತೃತ್ವದ ಎಲ್.ಡಿ.ಎಫ್. ಸರ್ಕಾರದ ಕೊನೆಯ ಬಜೆಟ್ ಆಗಿರಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಪೂರ್ವ ಚರ್ಚೆಗಳನ್ನು ಈ ಬಾರಿ ಆನ್‍ಲೈನ್‍ನಲ್ಲಿ ನಡೆಸಲಾಗುವುದು. ಹಣಕಾಸು ಸಚಿವ ಥಾಮಸ್ ಐಸಾಕ್ ಅವರಿಂದ ಈಗಾಗಲೇ ಬಜೆಟ್ ಸಿದ್ಧತೆಗಳು ಪ್ರಾರಂಭವಾಗಿವೆ. ಹಣಕಾಸು ಸಚಿವ ಥಾಮಸ್ ಐಸಾಕ್ ಡಿಸೆಂಬರ್ ಅಂತ್ಯದ ವೇಳೆಗೆ ಬಜೆಟ್ ಬರೆಯಲು ಪ್ರಾರಂಭಿಸಲಿದ್ದಾರೆ. ವಿಳಿಂಜಮ್ ತಪಾಸಣೆ ಬಂಗಲೆ ಕೇಂದ್ರೀಕರಿಸಿ ಹಣಕಾಸು ಸಚಿವರ ಚಟುವಟಿಕೆಗಳು ನಡೆಯಲಿದೆ. ಐಸಾಕ್ ಅವರ 12 ನೇ ಬಜೆಟ್ ಪ್ರಸ್ತುತಿಯೂ ಆಗಿದೆ.
ಜನವರಿ 8 ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರ ಭಾಷಣದೊಂದಿಗೆ ವಿಧಾನ ಸಭಾ ಅಧಿವೇಶನ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣದ ಕುರಿತು ವಂದನಾ ನಿರ್ಣಯ ಜನವರಿ 11 ರಿಂದ 13 ರವರೆಗೆ ನಡೆಯಲಿದೆ. ಬಜೆಟ್ ಕುರಿತು ಸಾರ್ವಜನಿಕ ಚರ್ಚೆ 18 ರಿಂದ 20 ರವರೆಗೆ ನಡೆಯಲಿದೆ. ವಿಧಾನ ಸಭಾ ಚುನಾವಣಾ ಅಧಿಸೂಚನೆ ಮಾರ್ಚ್‍ನಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಎರಡು ಮೂರು ತಿಂಗಳವರೆಗೆ ಚುನಾವಣಾ ಹಿನ್ನೆಲೆಯಲ್ಲಿ ವಿಧಾನಸಭೆ ಜನವರಿ 28 ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಡುವುದು. ಸಾರ್ವಜನಿಕ ಸಂಪರ್ಕ ಇಲಾಖೆ ಎನ್‍ಡಿಎಫ್ ಸರ್ಕಾರದ ಸಾಧನೆಗಳ ಕುರಿತು ಪುಸ್ತಕವನ್ನು ಬಜೆಟ್‍ಗೆ ಮುಂಚಿತವಾಗಿ ಬಿಡುಗಡೆ ಮಾಡುತ್ತಿದೆ.
ಬಜೆಟ್ ಮೂಲಕ ರಾಜ್ಯದಲ್ಲಿ ಕಲ್ಯಾಣ ಪಿಂಚಣಿಯನ್ನು 1,500 ರೂ.ಗೆ ಹೆಚ್ಚಿಸುವ ಸೂಚನೆಗಳಿವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಚಟುವಟಿಕೆಗಳನ್ನು ಬಜೆಟ್‍ನಲ್ಲಿ ಉಲ್ಲೇಖಿಸಲಾಗುವುದು. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಪರಿಗಣನೆ ನೀಡುವ ಸೂಚನೆಗಳಿವೆ. ಈ ಬಾರಿ ಬಜೆಟ್ ಮಂಡಿಸುವಾಗ ಖರ್ಚು ಸಮಿತಿಯ ವರದಿಯನ್ನು ವಿತರಿಸಲು ಸರ್ಕಾರ ಉದ್ದೇಶಿಸಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಜನಪ್ರಿಯ ಪ್ರಕಟಣೆಗಳನ್ನು ಬಜೆಟ್ ಒಳಗೊಂಡಿರುತ್ತದೆ.
ಏತನ್ಮಧ್ಯೆ, ಕೇಂದ್ರ ಸರ್ಕಾರದ ಬಜೆಟ್ ಪ್ರಸ್ತುತಿ ಕೂಡಾ ಜನವರಿಯಲ್ಲೇ ನಡೆಯುವ ಸಾಧ್ಯತೆ ಇದೆ. ಅಭೂತಪೂರ್ವ ಬಜೆಟ್ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದರು. ಕೋವಿಡ್‍ನಿಂದ ನೆಲಕ್ಕಚ್ಚಿರುವ ರಾಷ್ಟ್ರದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಪ್ರಕಟಣೆಗಳು ಬಜೆಟ್‍ನಲ್ಲಿ ಒಳಗೊಂಡಿರುತ್ತವೆ ಎಂದು ಸಚಿವೆ ಹೇಳಿರುವರು. ಬಜೆಟ್ ಪ್ರಕಟಣೆಗಳು ವಾಣಿಜ್ಯ ವಲಯ ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಭರವಸೆ ನೀಡುವ ನಿರೀಕ್ಷೆಯಿದೆ.