ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವನೆ ಸಂಬಂಧ ವಿದ್ಯುನ್ಮಾನ ಮತಯಂತ್ರಗಳನ್ನು ಅಭ್ಯರ್ಥಿಗಳ ಪಟ್ಟಿ ಲಗತ್ತಿಸುವ ನಿಟ್ಟಿನಲ್ಲಿ ಬ್ಲೋಕ್/ನಗರಸಭೆ ಚುನಾವಣೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ವೇರ್ ಹೌಸ್ ನಿಂದ ಮಂಗಳವಾರ ಇ.ವಿ.ಎಂ. ಗಳ ವಿತರಣೆ ನಡೆಯಿತು. 6 ಬ್ಲೋಕ್ ಪಂಚಾಯತ್ ಗಳಿಗಾಗಿ ಶೇ 20 ರಿಸರ್ವ್ ಸಹಿತ 1547 ಕಂಟ್ರೋಲ್ ಯೂನಿಟ್ ಗಳನ್ನೂ, 4647 ಬಾಲೆಟ್ ಯೂನಿಟ್ ಗಳನ್ನೂ ವಿತರಿಸಲಾಯಿತು. 3 ನಗರಸಭೆಗಳಿಗಾಗಿ ರಿಸರ್ವ್ ಸಹಿತ ತಲಾ 143 ಕಂಟ್ರೋಲ್ ಯೂನಿಟ್ ಗಳನ್ನೂ, ಬಾಲೆಟ್ ಯೂನಿಟ್ ಗಳನ್ನೂ ನೀಡಲಾಯಿತು.
ಬ್ಲೋಕ್ ಗಳ ಒಟ್ಟು ವಾರ್ಡ್-ಬೂತ್-ಕಂಟ್ರೋಲ್ಯೂನಿಟ್-ಬಾಲೆಟ್ ಯೂನಿಟ್ ಎಂಬ ಕ್ರಮದಲ್ಲಿ ಈ ಕೆಳಗೆ ನೀಡಲಾಗಿದೆ:
ಕಾರಡ್ಕ-105-181-218-654
ಮಂಜೇಶ್ವರ-125-247-297-891
ಕಾಸರಗೋಡು-123-244-293-879
ಕಾಞಂಗಾಡ್-98-192-231-693
ಪರಪ್ಪ-115-235-282-846
ನೀಲೇಶ್ವರ-98-188-226-678.
ನಗರಸಭೆಗಳ ಒಟ್ಟು ವಾರ್ಡ್-ಬೂತ್-ಕಂಟ್ರೋಲ್ ಯೂನಿಟ್-ಬಾಲೆಟ್ ಯೂನಿಟ್ ಎಂಬ ಕ್ರಮದಲ್ಲಿ ಈ ಕೆಳಗೆ ನೀಡಲಾಗಿದೆ:
ಕಾಸರಗೋಡು-38-39-45-45
ಕಾಞಂಗಾಡ್-43-51-60-60
ನೀಲೇಶ್ವರ-32-32-38-38
ಕಾಸರಗೋಡು ಜಿಲ್ಲೆಯಲ್ಲಿ 777 ವಾರ್ಡ್ ಗಳು, 140 ಮತಗಟ್ಟೆಗಳು
ಕಾಸರಗೋಡು ಜಿಲ್ಲೆಯಲ್ಲಿ 777 ವಾರ್ಡ್ ಗಳು, 140 ಮತಗಟ್ಟೆಗಳು ಇವೆ. 6 ಬ್ಲೋಕ್ ಪಂಚಾಯತ್ ಗಳ ವ್ಯಾಪ್ತಿಯಲ್ಲಿ 664 ವಾರ್ಡ್ ಗಳಲ್ಲಿ 1287 ಮತಗಟ್ಟೆಗಳಿವೆ. 3 ನಗರಸಭೆಗಳಲ್ಲಿ 113 ವಾರ್ಡ್ ಗಳಲ್ಲಿ 122 ಮತಗಟ್ಟೆಗಳಿವೆ.