ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕರ್ನಾಟಕದಿಂದ ಜಿಲ್ಲೆಗೆ ಆಗಮಿಸುವ 17 ಗಡಿ ಪಾಯಿಂಟ್ ಗಳಲ್ಲಿ ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಪೋಲೀಸರ ಜಂಟಿ ತಪಾಸಣೆ ಆರಂಭಿಸಲು ತೀರ್ಮಾನಿಸಲಾಗಿದೆ.
ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಮಾನವ ಅಕ್ರಮ ಸಾಗಣೆ, ಹಣದ ಅಕ್ರಮ ಸಾಗಣೆ, ಮಾದಕ ಪದಾರ್ಥಗಳ ಅಕ್ರಮ ಸಾಗಣೆ ಇತ್ಯಾದಿಗಳನ್ನು ತಡೆಯುವ ನಿಟ್ಟಿನಲ್ಲಿ ಈ ಜಂಟಿ ತಪಾಸಣೆ ಆರಂಭಿಸಲಾಗುವುದು. ಡಿ.12ಸಂಜೆ 6 ಗಂಟೆಯಿಂದ 14 ಸಂಜೆ 6 ಗಂಟೆ ವರೆಗೆ ಈ 17 ಗಡಿ ಪಾಯಿಂಟ್ ಗಳಲ್ಲಿ ಬಾರಿಕೋಡ್ ಬಳಸಿ ಮುಚ್ಚುಗಡೆ ಮಾಡಲಾಗುವುದು. ಇಲ್ಲಿ ಮೂರು ಜಿಲ್ಲೆಗಳ ಪೆÇಲೀಸರ ಪಡೆ ಜಂಟಿ ತಪಾಸಣೆ ನಡೆಸಲಿದ್ದಾರೆ.
ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ದಕ್ಷಿಣ ಕನ್ನಡ ಡೆಪ್ಯೂಟಿ ಕಮೀಷನರ್ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್, ಡೆಪ್ಯೂಟಿ ಕಮೀಷನರ್ ಆನಿಸ್ ಕಣ್ಮಣಿ ಜಾಯ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷೇಮಮಿತ್ರ, ಕಾಸರಗೋಡು ಚುನಾವಣೆ ವಿಭಾಗದ ಎ.ಕೆ.ರಮೇಂದ್ರನ್, ಆರ್.ಟಿ.ಒ. ಕೆ.ರಾಧಾಕೃಷ್ಣನ್, ಅಬಕಾರಿ ಡೆಪ್ಯೂಟಿ ಕಮೀಷನರ್ ವಿನೋದ್ ಬಿ.ನಾಯರ್, ಆದಾಯ ತೆರಿಗೆ ಅಧಿಕಾರಿ ಪ್ರೀತಾ ಸಭೆಯಲ್ಲಿ ಉಪಸ್ಥಿತರಿದ್ದರು.