ಬಿಕಾನೆರ್: 1971ರ ಯುದ್ಧ ಯೋಧರನ್ನು ಗೌರವಿಸಲು ಬಿಎಸ್‌ಎಫ್ ಸಿಬ್ಬಂದಿ ರಾಜಸ್ಥಾನದ ಅಂತರರಾಷ್ಟ್ರೀಯ ಗಡಿಯಲ್ಲಿ ಮಧ್ಯರಾತ್ರಿ 180 ಕಿ. ಮೀ ರಿಲೇ ಓಟ ನಡೆಸಿದ್ದಾರೆ.
ಅಂತರಾಷ್ಟ್ರೀಯ ಗಡಿಯಲ್ಲಿ ಮಧ್ಯರಾತ್ರಿ(ಡಿಸೆಂಬರ್ 13/14) ಬರೋಬ್ಬರಿ 180 ಕಿ.ಮೀವರೆಗೆ ಬಿಎಸ್‌ಎಫ್ ಯೋಧರು ಟಾರ್ಚ್ ಹಿಡಿದು ರಿಲೇ ಓಡಿದ್ದು, 11 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿ ಮುಟ್ಟಿದ್ದಾರೆ.
ಈ ಕುರಿತಾಗಿ ಬಿಎಸ್‌ಎಫ್ ಮೂಲಗಳು ತಿಳಿಸಿದ್ದು, ವೀಡಿಯೋ ಬಿಡುಗಡೆಗೊಂಡಿದೆ. ಕೊರೆಯುವ ಚಳಿಯಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಈ ರಿಲೇ ಓಟವು ಎಲ್ಲಿಂದ ಪ್ರಾರಂಭವಾಯಿತು ಎಂಬ ಮಾಹಿತಿ ಲಭ್ಯವಿಲ್ಲ, ಆದರೆ ಅನುಪ್‌ಗರ್‌ನಲ್ಲಿ ರಿಲೇ ಓಟವು ಮುಕ್ತಾಯಗೊಂಡಿದೆ. ಜೊತೆಗೆ 1971ರ ಯೋಧರಿಗೆ ನೀಡಿದ ಗೌರವವು ಸ್ಮರಣಾರ್ಥಕವಾಗಿದೆ.
ಭಾರತ-ಪಾಕಿಸ್ತಾನ ನಡುವೆ 1971 ಡಿಸೆಂಬರ್ 3ರಂದು ಆರಂಭಗೊಂಡ ಯುದ್ಧವು , 1971 ಡಿಸೆಂಬರ್ 16ಕ್ಕೆ ಮುಕ್ತಾಯಗೊಂಡಿತು.