ನವದೆಹಲಿ: ದೇಶದಲ್ಲಿಂದು 25,153 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.
ಈವರೆಗೆ ದೇಶದಲ್ಲಿ ಸೋಂಂಕಿನಿಂದ ಗುಣ ಮುಖರಾದವರ ಸಂಖ್ಯೆ 95,50,712ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಪ್ರಮಾಣ 1,45,136ಕ್ಕೆ ತಲುಪಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,08,751ಕ್ಕೆ ಇಳಿಕೆಯಾಗಿದೆ.
ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದ್ದರೆ, ಅತೀ ಹೆಚ್ಚು ಸಾವು ದಾಖಲಾದ ದೇಶಗಳಲ್ಲಿ ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ.