ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತ ಪ್ರಕರಣ ಮಂಗಳವಾರ 94 ಲಕ್ಷದ 62 ಸಾವಿರದ 810ಕ್ಕೆ ಏರಿಕೆಯಾಗಿದೆ. 31 ಸಾವಿರದ 118 ಹೊಸ ಪ್ರಕರಣಗಳು ಪತ್ತೆಯಾಗಿವೆ.
482 ಮಂದಿ ಕೊರೋನಾ ಸೋಂಕಿಗೆ ಬಲಿಯಾಗುವ ಮೂಲಕ ಇದುವರೆಗೆ ದೇಶದಲ್ಲಿ ಒಟ್ಟು 1 ಲಕ್ಷದ 37 ಸಾವಿರದ 621 ಮಂದಿ ಮೃತಪಟ್ಟಿದ್ದಾರೆ. ಸದ್ಯ ಒಟ್ಟು 4 ಲಕ್ಷದ 35 ಸಾವಿರದ 603 ಸಕ್ರಿಯ ಕೇಸುಗಳಿವೆ.
ಕಳೆದ 24 ಗಂಟೆಗಳಲ್ಲಿ 41 ಸಾವಿರದ 985 ಮಂದಿ ಸೋಂಕಿನಿಂದ ಗುಣಮುಖರಾಗಿ ಹೊರಬರುವುದರೊಂದಿಗೆ ಒಟ್ಟು 88 ಲಕ್ಷದ 89 ಸಾವಿರದ 585 ಮಂದಿ ಗುಣಮುಖರಾಗಿದ್ದಾರೆ.