ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಎರಡನೇ ಹಂತದ ಪ್ರಕ್ರಿಯೆಗೆ ಸಮರ್ಪಕ ಭದ್ರತೆ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಹೇಳಿದ್ದಾರೆ.
ಎರಡನೇ ಹಂತದ ಚುನಾವಣೆಯಲ್ಲಿ ಭದ್ರತೆ ಒದಗಿಸಲು ಒಟ್ಟು 19,736 ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 63 ಡಿವೈಎಸ್‍ಪಿಗಳು, 316 ಇನ್ಸ್‍ಪೆಕ್ಟರ್‍ಗಳು, 1594 ಎಸ್‍ಐಗಳು / ಎಎಸ್‍ಐಗಳು ಮತ್ತು ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಮತ್ತು ಸಿವಿಲ್ ಪೆÇಲೀಸ್ ಅಧಿಕಾರಿ ಹುದ್ದೆಯಲ್ಲಿರುವ 17,763 ಅಧಿಕಾರಿಗಳು ಸೇರಿದ್ದಾರೆ. ಇದಲ್ಲದೆ, ಈ ಬಾರಿ 889 ಹೋಂ ಗಾರ್ಡ್ ಮತ್ತು 4,574 ವಿಶೇಷ ಪೆÇಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪೆÇಲೀಸ್ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು 765 ಗುಂಪು ಪೆಟ್ರೋಲ್ ತಂಡ ಮತ್ತು 365 ಕಾನೂನು ಜಾರಿ ಪೆಟ್ರೋಲ್ ತಂಡವನ್ನು ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 60 ಪಿಕೆಟ್ ಪೆÇೀಸ್ಟ್‍ಗಳು ಇರಲಿವೆ. ವಿಶೇಷ ಸ್ಟ್ರೈಕಿಂಗ್ ಫೆÇೀರ್ಸ್ ಗುಂಪುಗಳನ್ನು ಸಹ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
1437 ಬೂತ್‍ಗಳಲ್ಲಿ ವಿಶೇಷ ಕಣ್ಗಾವಲು ಮತ್ತು ಗಸ್ತು ಸ್ಥಾಪಿಸಲಾಗಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.