ನವದೆಹಲಿ: ಕೋವಿಡ್ -19 ಗೈಡೆನ್ಸ್, ಅಪ್ ಡೇಟ್ಸ್ ಗಳನ್ನು ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಸ್ ಒ) ಬಿಡುಗಡೆ ಮಾಡಿದೆ.
ಈ ಅಪ್ಲಿಕೇಶನ್ ಹೆಸರು ಡಬ್ಲ್ಯುಎಚೊ ಕೋವಿಡ್-19 ಅಪ್ ಡೇಟ್ಸ್(WHO COVID-19 Updates). ಈ ಅಪ್ಲಿಕೇಶನ್ ಕೊರೊನಾ ವೈರಸ್ ಕುರಿತು ಸಂಪೂರ್ಣ ವಿಶ್ವಾಸಾರ್ಹ ಮಾಹಿತಿ ಒಳಗೊಂಡಿರಲಿದೆ. ಆದರೆ, ಇದು ಸಂಪರ್ಕ ಪತ್ತೆ ಹಚ್ಚುವಿಕೆಯಂತಹ ವಿಶೇಷತೆ ಹೊಂದಿಲ್ಲ.
ಈ ವರ್ಷದ ಏಪ್ರಿಲ್ ನಲ್ಲಿಯೇ ಕೊರೊನಾ ವೈರಸ್ ಅಪ್ಲಿಕೇಶನ್ ಪರಿಚಯಿಸಿತಾದರೂ, ಸಾರ್ವಜನಿಕರಿಗೆ ಲಭ್ಯವಿಲ್ಲದ ಕಾರಣ ಆಪ್ ಸ್ಟೋರ್ ಗಳು ಅದನ್ನು ತೆಗೆದುಹಾಕಿದ್ದವು.
ಡಬ್ಲ್ಯುಎಚ್ ಒ ಕೋವಿಡ್-19 ಅಪ್ ಡೇಟ್ಸ್ ಅಪ್ಲಿಕೇಶನ್ ತಾಜಾ ಸ್ಥಳೀಯ ಮಾಹಿತಿ ಆಧಾರದ ಮೇಲೆ ನೈಜ-ಸಮಯದ ಅಧಿಸೂಚನೆಗಳನ್ನು ಒದಗಿಸಲಿದೆ.
ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ತಿಳಿಯಲು, ದೇಶ ಹಾಗೂ ವಿಶ್ವದಾದ್ಯಂತ ನೊಂದಾಯಿತ ಪ್ರಕರಣಗಳ ಸಂಖ್ಯೆಯನ್ನು ಕಾಲ-ಕಾಲಕ್ಕೆ ಮುಖಪುಟದಲ್ಲಿ ಕಾಣಿಸಿಕೊಳ್ಳಲಿದೆ. ಆರೋಗ್ಯ ವಿಷಯದಲ್ಲಿ ಅನುಸರಿಸಬೇಕಾದ ಸೂಚನೆಗಳನ್ನು ಒಳಗೊಂಡಿರಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಪ್ರತಿಕ್ರಿಯೆ ನಿಧಿಗೆ ದೇಣಿಗೆ ನೀಡಲು ಬಯಸುವವರು ಈ ???ಪ್ ಮೂಲಕ ದೇಣಿಗೆ ನೀಡಬಹುದು.