ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 19 ವರ್ಷದ ಬಿಜೆಪಿ ಕಾರ್ಯಕರ್ತರು ಸ್ಪರ್ಧಿಸಿದ್ದಾರೆ ಎಂದು ಮಹಿಳಾ ಮೋರ್ಚಾ ರಾಜ್ಯ ನಾಯಕಿ ಸ್ಮಿತಾ ಮೆನನ್ ಹೇಳಿದ್ದಾರೆ. ಯುವಕರ ರಾಜಕೀಯ ಪ್ರವೇಶದ ಕುರಿತು ಚಾನೆಲ್ ಚರ್ಚೆಯಲ್ಲಿ ಸ್ಮಿತಾ ಮೆನನ್ ಈ ಬಗ್ಗೆ ಉಲ್ಲೇಖಿಸಿ ಮಾತನಾಡಿರುವರು. ಕೇರಳದ ಯುವಕರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಎಂದು ಸಂಸರ್ಶಕರು ಕೇಳಿದ ಪ್ರಶ್ನೆಗೆ ಅವರು ಅಪ್ರಬುದ್ದ ಹೇಳಿಕೆ ನೀಡಿರುವರೆಂದು ಸಾಮಾಜಿಕ ಜಾಲತಾಣಗಳು ಟ್ರೋಲ್ ಮಾಡಿವೆ.
ಬಿಜೆಪಿ ಪಕ್ಷದತ್ತ ಯುವಕರು ಒಲವು ತೋರಿಸುತ್ತಿಲ್ಲ ಎಂದು ಹೇಳುವುದು ತಪ್ಪು. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಲ್ಲಿ 19 ವರ್ಷ ವಯಸ್ಸಿನ ಮಕ್ಕಳು ಸೇರಿದ್ದಾರೆ. ಕೆ ಸುರೇಂದ್ರನ್ ಬಿಜೆಪಿ ರಾಜ್ಯಾಧ್ಯಕ್ಷರಾದಾಗಿನಿಂದ ಅವರು ಹಲವಾರು ಸಭೆಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹೆಚ್ಚು ಮಹಿಳೆಯರು ಮತ್ತು ಯುವಕರು ಸ್ಪರ್ಧೆಗಿಳಿಯುವ ಆಸಕ್ತಿ ತೋರಬೇಕೆಂದು ತಿಳಿಸಿದ್ದರು. ನಮ್ಮ ಜಿಲ್ಲಾಧ್ಯಕ್ಷರು ಕೂಡ 50 ವರ್ಷದೊಳಗಿನವರು. ನಮ್ಮದು ಇತರ ಪಕ್ಷಗಳಿಗಿಂತ ಭಿನ್ನವಾಗಿ ಎಲ್ಲಾ ರೀತಿಯಲ್ಲೂ ಯುವಕರಿಗೆ ಪ್ರಾಮುಖ್ಯತೆ ನೀಡುವ ಪಕ್ಷವಾಗಿದೆ. ಬಿಜೆಪಿ ಅತಿ ಹೆಚ್ಚು ಯುವಕರು ಮುಂದೆ ಬರುವ ಪಕ್ಷವಾಗಿದೆ ಎಂದು ಸ್ಮತಾ ಮೆನನ್ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸ್ಮಿತಾ ಅವರ ಹೇಳಿಕೆಗಳ ವಿಡಿಯೋ ಹೊರಬಿದ್ದ ಬಳಿಕ ಈ ಘಟನೆಯನ್ನು ಟ್ರೋಲ್ಗಳು ವಹಿಸಿಕೊಂಡವು. ಸ್ಪರ್ಧಿಸಲು ಕನಿಷ್ಠ ವಯಸ್ಸು 21 ಎಂದು ತಿಳಿಯದಿರುವ ಯಾರಾದರೂ ಮಹಿಳಾ ಮೋರ್ಚಾದ ನಾಯಕಿಯೋರ್ವೆ ಇದ್ದರೆ ಮತ್ತು ಅವರ ವಿಶ್ವ ದೃಷ್ಟಿಕೋನದ ಬಗ್ಗೆ ಏನಿರಬಹುದೆಂದು ಫೇಸ್‍ಬುಕ್‍ಗಳಲ್ಲಿ ಭಾರೀ ಅಭಿಪ್ರಾಯ, ಟೀಕೆಗಳು ವ್ಯಕ್ತವಾಗಿವೆ.