HEALTH TIPS

ಕೋವಿಡ್-19 ಸುರಕ್ಷತೆ: ಸರ್ಜಿಕಲ್, ಬಟ್ಟೆಯ ಮಾಸ್ಕ್ ಗಳು ಪುನರ್ ಬಳಕೆಗೆ ಯೋಗ್ಯವಲ್ಲ!

      ನವದೆಹಲಿ: ಫೇಸ್ ಮಾಸ್ಕ್ ಕೋವಿಡ್-19 ಸೋಂಕಿನಿಂದ ಜನರನ್ನು ರಕ್ಷಿಸುತ್ತದೆ, ಆದರೆ ಅನೇಕ ಮಂದಿ ಮಾಸ್ಕ್ ಗಳನ್ನು ಪುನರ್ ಬಳಕೆ ಮಾಡಲು ಒಲವು ತೋರುತ್ತಾರೆ. ಇದರಿಂದ ಅವುಗಳ ದಕ್ಷತೆಯಲ್ಲಿ ಕುಂಠಿತವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಔಷಧ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಮೂರು ಎಳೆಯ ಸರ್ಜಿಕಲ್ ಮಾಸ್ಕ್ ಗಳನ್ನು ಅನೇಕ ಜನರು ಬಳಸುತ್ತಾರೆ. ಆದರೆ, ಇವುಗಳನ್ನು ಹೆಚ್ಚು ದಿನಗಳ ಕಾಲ ಧರಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

      ಮೂರು ಎಳೆಯ ಸರ್ಜಿಕಲ್ ಮಾಸ್ಕ್ ಗಳು ಕೇವಲ ನಾಲೈದು ಗಂಟೆಗಳ ಕಾಲ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ನಂತರ ಅವುಗಳನ್ನು ಬಿಸಾಡಬೇಕು. ಒಂದು ವೇಳೆ ಅವುಗಳನ್ನು ಧರಿಸುವುದನ್ನು ಮುಂದುವರೆಸಿದ್ದಲ್ಲಿ ಕೋವಿಡ್-19 ಪಾಸಿಟಿವ್ ರೋಗಿ ಸಂಪರ್ಕಕ್ಕೆ ಬಂದಲ್ಲಿ ಗ್ಯಾರೆಂಟಿ ಸೋಂಕು ಬರಲಿದೆ. ಈ ಮಾಸ್ಕ್ ತೆಳುವಾಗುವುದರಿಂದ ಗಾಳಿ, ಸೀನು ಅಥವಾ ಕೆಮ್ಮಿನಿಂದ ಬರುವ ಸಣ್ಣ ಕಣಗಳನ್ನು ತಡೆಯಲು ಸಾಧ್ಯವಿರುವುದಿಲ್ಲ ಎಂದು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ನಿರ್ದೇಶಕ ಡಾ. ಸಿ. ನಾಗರಾಜ್ ಹೇಳಿದ್ದಾರೆ.

      ಒಂದು ಸಲ ಬಳಸಿದ ಮೂರು ಎಳೆಯ ಸರ್ಜಿಕಲ್ ಮಾಸ್ಕ್ ಗಳನ್ನು ಪುನರ್ ಬಳಕೆ ಮಾಡುವುದು ಯೋಗ್ಯವಲ್ಲಾ, ಇವುಗಳು ಗಾಳಿಯ ಕಣಗಳನ್ನು ಫಿಲ್ಟರ್ ಮಾಡಲು ಶೇಕಡಾ 65 ರಷ್ಟು ಪರಿಣಾಮಕಾರಿಯಾಗುತ್ತಿರುತ್ತವೆ. ಆದರೆ, ಒಂದಕ್ಕಿಂತ ಹೆಚ್ಚು ಬಾರಿ ಬಳಸಿದಾಗ ಅವುಗಳ ಪರಿಣಾಮಕಾರಿತ್ವವು ಶೇಕಡಾ 25 ಕ್ಕೆ ಇಳಿಯುತ್ತದೆ ಎಂದು ಮ್ಯಾಸಚೂಸೆಟ್ಸ್ ಲೋವೆಲ್ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೆÇೀರ್ನಿಯಾ ಬ್ಯಾಪ್ಟಿಸ್ಟ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಕಟಿಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

    ಬಟ್ಟೆಯ ಮಾಸ್ಕ್ ಗಳ ಬಳಕೆ ಕೂಡಾ ಯೋಗ್ಯವಲ್ಲಾ ಎಂದು ತಜ್ಞರು ಹೇಳಿದ್ದಾರೆ. ವೈರಸ್ ಗಳು ತುಂಬಾ ಸಣ್ಣದಾಗಿದ್ದರೆ ಮಾಸ್ಕ್ ಗಳ ಸಣ್ಣ ರಂದ್ರಗಳ ಮೂಲಕ ಪ್ರಸಾರವಾಗುವ ಸಾಧ್ಯತೆ ಹೆಚ್ಚಾಗಿರುತ್ತವೆ. ಮಾಸ್ಕ್ ಗಳು ಕಲುಷಿತವಾಗುವುದರಿಂದ ಬಹಳಷ್ಟು ಜನರು ತೊಳೆದು ಬಳಸುತ್ತಾರೆ. ಅದನ್ನು ಕೂಡಾ ಶಿಫಾರಸು ಮಾಡಲು ಆಗುವುದಿಲ್ಲ ಎಂದು ಎಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಡಾ. ಕೆ. ಸುನೀಲ್ ಕುಮಾರ್ ತಿಳಿಸಿದ್ದಾರೆ.

       ಮೂರು ಎಳೆಯ ಸರ್ಜಿಕಲ್ ಮಾಸ್ಕ್, ಬಟ್ಟೆಯ ರೀತಿಯ  ಮಾಸ್ಕ್ ಗಳನ್ನು ದಿನಕ್ಕೆ ಕೇವಲ ನಾಲ್ಕರಿಂದ ಐದು ಗಂಟೆ ಮಾತ್ರ ಬಳಸುವಂತೆ ಡಾ. ನಾಗರಾಜ್ ಸಲಹೆ ನೀಡಿದ್ದಾರೆ. ಸೋಂಕಿತ ವ್ಯಕ್ತಿಯೂ ಹತ್ತಿರ ಬಂದಾಗ ಮೂರು ಎಳೆಯ ಮಾಸ್ಕ್ ಗಳು ಮತ್ತು ಹತ್ತಿಯ ಮಾಸ್ಕ್ ಗಳು ಕಡಿಮೆ ಪರಿಣಾಮಕಾರಿಯಾಗಿರುತ್ತವೆ ಎಂದು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ. ಹಿರೆನಾಪ್ಪ ಉಡ್ನೂರ್ ಅಭಿಪ್ರಾಯಪಟ್ಟಿದ್ದಾರೆ. ಮಾಸ್ಕ್ ಧರಿಸಿ ಆರು ಅಡಿಗಳ ಅಂತರ ಕಾಯ್ದುಕೊಳ್ಳುವುದರಿಂದ ಮಾತ್ರ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಡಾ. ನಾಗರಾಜ್ ಹೇಳಿದ್ದಾರೆ.

                ಮಾಸ್ಕ್ ಗಳಲ್ಲಿ ಮೂರು ವಿಧ:

     ಮೂರು ಅಥವಾ ಎರಡು ಎಳೆಯ ಸರ್ಜಿಕಲ್ ಮಾಸ್ಕ್ ಗಳು: ಈ ರೀತಿಯ ಸರ್ಜಿಕಲ್ ಮಾಸ್ಕ್ ಗಳು ಸಡಿಲವಾಗಿದ್ದು, ದೊಡ್ಡ ಕಣದ ಹನಿಗಳಿಂದ ರಕ್ಷಿಸಬಹುದು. ಅವುಗಳು ಸಣ್ಣ ಕಣಗಳು ದೇಹ ಪ್ರವೇಶಿಸದಂತೆ ರಕ್ಷಿಸಬಹುದು. ಪ್ರತಿಬಳಕೆಯ ನಂತರ ಸರ್ಜಿಕಲ್ ಮಾಸ್ಕ್ ಗಳನ್ನು ಎಸೆಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

      ಬಟ್ಟೆಯ ಮಾಸ್ಕ್ ಗಳು: ಮನೆಯಲ್ಲಿಯೇ ತಯಾರಿಸುವ ಬಟ್ಟೆಯ ಮಾಸ್ಕ್ ಗಳು ಸಣ್ಣ ರೀತಿಯ ರಕ್ಷಣೆ ನೀಡುತ್ತವೆ. ಆದರೆ, ರೋಗ ಲಕ್ಷಣವಿಲ್ಲದ ಜನರಿಂದ ಮಾತ್ರ ರೋಗ ಬಾರದಂತೆ ಇವುಗಳು ತಡೆಯಬಹುದು. ಸಾರ್ವಜನಿಕ ಸ್ಥಳಗಳ ಕಡೆಗೆ ಇವುಗಳನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರ, ನೈರ್ಮಲ್ಯದ ಕಡೆಗೆ ಗಮನ ಹರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

       ಎನ್ 95 ಮಾಸ್ಕ್ ಗಳು: ಇವುಗಳು ಹೆಚ್ಚಿನ ಬಿಗಿಯಾದ ಮಾಸ್ಕ್ ಗಳಾಗಿವೆ. ಈ ಮಾಸ್ಕ್ ಗಳನ್ನು ಧರಿಸುವುದರಿಂದ ಸಣ್ಣ ಕಣಗಳಿಂದ ಶೇ.95ರಷ್ಟನ್ನು ಫಿಲ್ಟರ್ ಮಾಡಬಹುದಾಗಿದೆ. ಇವುಗಳನ್ನು ಸಹ ಐದರಿಂದ- ಏಳು ದಿನಗಳವರೆಗೆ ಮಾತ್ರ ಮರು ಬಳಸಬಹುದಾಗಿದೆ.  


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries