ತಿರುವನಂತಪುರ: ವೃದ್ಧಾಪ್ಯ ಪಿಂಚಣಿ, ವಿಧವೆ-ಅವಿವಾಹಿತ ಪಿಂಚಣಿ, ಅಂಗವೈಕಲ್ಯ ಪಿಂಚಣಿ ಮತ್ತು ಕೃಷಿ ಕಾರ್ಮಿಕ ಪಿಂಚಣಿ ಮುಂತಾದ ಕಲ್ಯಾಣ ಪಿಂಚಣಿ ಪಡೆದವರು ಮಾಸ್ಟರಿಂಗ್ ಮಾಡಬೇಕು ಎಮದು ಸರ್ಕಾರ ಸೂಚನೆ ನೀಡಿದೆ.
ಜನವರಿ 1 ರಿಂದ(ನಾಳೆಯಿಂದ) ಮಾರ್ಚ್ 20 ರವರೆಗೆ ಅಕ್ಷಯ ಕೇಂದ್ರಗಳಲ್ಲಿ ಮಸ್ಟರಿಂಗ್ ಮಾಡಬಹುದು. ಅಕ್ಷಯ ಕೇಂದ್ರಗಳಲ್ಲಿ ಆಧಾರ್ ಕಾರ್ಡ್‍ನೊಂದಿಗೆ ತೆರಳಿ ಅಗತ್ಯ ದಾಖಲೆಗಳನನು ಸಲ್ಲಿಸಿ ಮಸ್ಟರಿಂಗ್ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ.
ಅಕ್ಷಯ ಕೇಂದ್ರಗಳು ಅಂಗವಿಕಲರು, ವೃದ್ಧರು ಮತ್ತು ಅನಾರೋಗ್ಯದ ಕಾರಣದಿಂದ ಹಾಸಿಗೆ ಹಿಡಿದವರ ಮನೆಗಳಿಗೆ ತೆರಳಿ ಮಸ್ಟರಿಂಗ್ ಸೌಲಭ್ಯವನ್ನು ಒದಗಿಸಲಿದೆ.
ಕ್ಷೇಮನಿಧಿ ಬೋರ್ಡ್ ಪಿಂಚಣಿ ಮತ್ತು ಸಾಮೂಹಿಕ ಕಲ್ಯಾಣ ಪಿಂಚಣಿ ಎಂಬ ಎರಡು ಪಿಂಚಣಿಗಳನ್ನೂ ಪಡೆಯುವವರು ಎರಡೂ ಸಂಖ್ಯೆಗಳಿಗೂ ಪ್ರತ್ಯೇಕ ಮಸ್ಟರಿಂಗ್ ನಡೆಸಲು ತಿಳಿಸಲಾಗಿದೆ. ಮಸ್ಟರಿಂಗ್ ದಾಖಲೀಕರಣದ ಬಳಿಕ ಲಭ್ಯವಾಗುವ ದಾಖಲೆಗಳನ್ನು ಪ್ರಿಂಟ್ ತೆಗೆದು ಜಾಗರೂಕತೆಯಿಂದ ಇಟ್ಟುಕೊಂಡಿರಬೇಕು ಎಂದು ತಿಳಿಸಲಾಗಿದೆ.