ಪತ್ತನಂತಿಟ್ಟು: ಶಬರಿಮಲೆ ಕ್ಷೇತ್ರದಲ್ಲಿ ಯಾತ್ರಾರ್ಥಿಗಳ ಸಂಖ್ಯೆಯನ್ನು ಇನ್ನು ಹೆಚ್ಚಿಸುವುದಿಲ್ಲ ಎಂದು ದೇವಸ್ವಂ ಅಧಿಕೃತರು ತಿಳಿಸಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳಲು ಮುಖ್ಯ ಕಾರ್ಯದರ್ಶಿಗಳ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೋವಿಡ್ ನಿಬಂಧನೆಗಳ ಹಿನ್ನೆಲೆಯಲ್ಲಿ ಪ್ರತಿನಿತ್ಯ 2,000 ಯಾತ್ರಾರ್ಥಿಗಳಿಗೆ, ವಾರದ ರಜಾ ದಿನಗಳಲ್ಲಿ(ವಾರಾಂತ್ಯ) 3,000 ಮಂದಿಗೆ ಭೇಟಿ ನೀಡಲು ಮಾತ್ರ ಈ ಹಿಂದೆ ಅವಕಾಶ ನೀಡಲಾಗಿದ್ದು ಸದ್ಯ ಇದೇ ನಿಯಮಗಳಂತೆ ನಡೆಯಲಿದೆ.
ಏತನ್ಮಧ್ಯೆ, ಕೋವಿದ್ ತಪಾಸಣೆಯನ್ನು ಶಬರಿಮಲೆಯಲ್ಲಿ ಬಿಗಿಗೊಳಿಸಲಾಗಿದೆ. ಕಳೆದ ಭಾನುವಾರ ನಡೆಸಿದ್ದ ತಪಾಸಣೆಯಲ್ಲಿ ಸನ್ನಿಧಾನಂನಲ್ಲಿ ಮಾತ್ರ 36 ಜನರಿಗೆ ಸೋಂಕು ದೃಢಪಟ್ಟಿತ್ತು. ಯಾವುದೇ ಸೋಂಕು ಹರಡಿದರೆ ಜಾಗರೂಕರಾಗಿರಿ ಎಂದು ಆರೋಗ್ಯ ಇಲಾಖೆ ಪೆÇಲೀಸರಿಗೆ ಸೂಚಿಸಿದೆ.