ಕುಂಬಳೆ: ಮನೆಕೆಲಸದ ಕಾರ್ಮಿಕೆಯಾದ ಕರ್ನಾಟಕ ನಿವಾಸಿ ಅನಾಥ ಮಹಿಳೆಯೋರ್ವೆಯಿಂದ ಚಿನ್ನಾಭರಣ ಮತ್ತು ಹಣ ನಂಬಿಸಿ ಮೋಸದಿಂದ ದೋಚಲಾಗಿದೆ ಎಂದು ಸಂತ್ರಸ್ಥೆ ಸುದ್ದಿಗೋಷ್ಠಿಯಲ್ಲಿ ಅವಲತ್ತುಕೊಂಡಿರುವರು.
ದೂರುದಾತೆ ಮೂಲತಃ ಮಂಗಳೂರು ನಿವಾಸಿಯೂ, ಹಲವು ವರ್ಷಗಳಿಂದ ಉಪ್ಪಳ ಪರಿಸರದಲ್ಲಿ ಮನೆಗೆಲಸಗಳನ್ನು ಮಾಡಿ ಬದುಕು ಸಾಗಿಸುತ್ತಿದ್ದ ಜಿಲ್ಲು(68) ಎಂಬ ಅನಾಥ ಮಹಿಳೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತನಗಾದ ನಿರಂತರ ಅನ್ಯಾಯ, ವಂಚನೆ ಮತ್ತು ಇದೀಗ ದಿಕ್ಕೆಟ್ಟಿರುವ ಸಂಕಷ್ಟದ ಸ್ಥಿತಿಯ ಬಗ್ಗೆ ಪತ್ರಕರ್ತರೊಂದಿಗೆ ದುಃಖ ಹಂಚಿಕೊಂಡರು.
ಉಪ್ಪಳ ನಿವಾಸಿ ಅರ್ಷೀದ್ ಮತ್ತು ಅವರ ಪತ್ನಿ ಉಮೈಬಾ ಅವರು ತನ್ನೊಂದಿಗೆ ಹೆಚ್ಚು ನಿಕಟತೆ ಬೆಳೆಸಿ ನಂಬಿಕೆ ಗಳಿಸಿ ತನ್ನಲ್ಲಿರುವ ಸಂಪತ್ತಿನ ಬಗ್ಗೆ ನಿಖರ ಮಾಹಿತಿ ಪಡೆದು ತೊಕ್ಕೋಟಿನ ಬ್ಯಾಂಕೊಂದ ಲಾಕರ್‍ನಲ್ಲಿ ಇರಿಸಲಾಗಿದ್ದ 20 ಪವನ್ ಚಿನ್ನಾಭರಣ ಹಾಗೂ 1.5 ಲಕ್ಷ ರೂ. ನಗದನ್ನು ತನಗೆ ಸ್ಮøತಿ ತಪ್ಪಿಸಿ ದಾಖಲೆಗಳಿಗೆ ಸಹಿ ಹಾಕಿಸಿ ದೋಚಿದ್ದಾರೆ ಎಂದು ಜಿಲ್ಲು ಆರೋಪಿಸಿದರು. ಅನಾಥ ಮಕ್ಕಳನ್ನು ರಕ್ಷಿಸಲಾಗುವುದು ಎಂಬ ನಂಬಿಕೆಯಿಂದ ಈ ವಂಚನೆ ನಡೆಸಲಾಯಿತು. ಚಿನ್ನ ಮತ್ತು ನಗದು ವಂಚಿಸಿದ್ದರ ಬಗ್ಗೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದು, ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಹೇಳಿದರು.