ಕಿಜಿಕಂಬಳಂ: ಟೆಂಟಿ-20 ಆಡಳಿತ ಚುಕ್ಕಾಣಿ ಹಿಡಿಯಲಿರುವ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಅಧ್ಯಕ್ಷರು ಅಧಿಕಾರ ವಹಿಸಲಿದ್ದಾರೆ. ಮೂವರು ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಸದಸ್ಯರಲ್ಲಿ ಹೆಚ್ಚಿನವರು ಮಹಿಳೆಯರು. ಕಿಜಿಕಂಬಳಂ, ಕುನ್ನತ್ತುನಾಡು, ಇಕ್ಕರನಾಡ್ ಮತ್ತು ಮಝಿವಣ್ಣೂರುಗಳಲ್ಲಿ ಈ ಬಾರಿ ಟ್ವಿಂಟಿ-20 ಅಧಿಕಾರಕ್ಕೆ ಬಂದಿದೆ. ಎಲ್ಲಾ ನಾಲ್ಕು ಪಂಚಾಯಿತಿಗಳಲ್ಲಿ ಮಹಿಳೆಯರು ಟ್ವೆಂಟಿ -20 ತಂಡವನ್ನು ಮುನ್ನಡೆಸಲಿದ್ದಾರೆ.
ಪಂಚಾಯಿತಿಗಳಲ್ಲಿ ಕಿಜಿಕಂಬಳ ಮತ್ತು ಇಕ್ಕರನಾಡದಲ್ಲಿ ಮಹಿಳಾ ಮೀಸಲಾತಿ ಇತ್ತು. ಆದರೆ ಕುನ್ನತ್ತುನಾಡು ಮತ್ತು ಮಝಿವಣ್ಣೂರಿನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ(ಜನರಲ-ಮೀಸಲು ರಹಿತ)ಕ್ಕೆ ಸೇರ್ಪಡೆಯಾಗಿದೆ. ಇಲ್ಲಿಯೂ ಮಹಿಳಾ ಪ್ರತಿನಿಧಿಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಕಿಜಿಕಂಬಳಂನಲ್ಲಿ ಮಿನಿ ರತೀಶ್, ಇಕ್ಕರನಾಡ್ ನಲ್ಲಿ ದೀನಾ ದೀಪಕ್, ಕುನ್ನತ್ತುನಾಡ್ ನಲ್ಲಿ ನೀತಾ ಮೋಳ್ ಎಂ.ವಿ., ಮಝಿವಣ್ಣೂರಿನಲ್ಲಿ ಬಿನ್ಸಿ ಬೈಜು ಟ್ವೆಂಟಿ -20 ಮಹಿಳಾ ಅಧ್ಯಕ್ಷರಾಗಲಿದ್ದಾರೆ.
ಕುನ್ನತ್ತುನಾಡು ಹೊರತುಪಡಿಸಿ, ಉಳಿದೆಡೆ ಮೂವರು ಉಪಾಧ್ಯಕ್ಷರು ಮಹಿಳೆಯರಾಗಲಿದ್ದಾರೆ. ನಾಲ್ಕು ಪಂಚಾಯಿತಿಗಳಲ್ಲಿ 12 ಸ್ಥಾಯಿ ಸಮಿತಿ ಸದಸ್ಯರಲ್ಲಿ ಒಂಬತ್ತು ಮಹಿಳೆಯರು ಒಳಗೊಳ್ಳುವರು. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಸದಸ್ಯರು ಸೇರಿದಂತೆ 20 ಸದಸ್ಯರಲ್ಲಿ 16 ಮಂದಿ ಮಹಿಳೆಯರಾಗಲಿದ್ದಾರೆ!.
ಟ್ವೆಂಟಿ -20 ಅಧ್ಯಕ್ಷ ಮತ್ತು ಮುಖ್ಯ ಸಂಯೋಜಕ ಸಾಬು ಎಂ ಜಾಕೋಬ್ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಆಯ್ಕೆಗೊಳಿಸಿರುವುದು ಸ್ತ್ರೀಯರನ್ನು ಮುಖ್ಯವಾಹಿನಿಗೆ ತರುವ ಚಾಲನೆಯ ಭಾಗವಾಗಿದೆ ಎಂದು ಪ್ರತಿಕ್ರಿಯಿಸಿರುವರು.