ರೋಮ್ : ಫಾಸ್ಟ್ ಎಂದಾಕ್ಷಣ ತೀರಾ ಇತ್ತೀಚೆಗೆ ಇದು ಕಾಲಿಟ್ಟಿದೆ ಎಂದೇ ಅಂದುಕೊಳ್ಳಲಾಗುತ್ತಿದೆ. ಆದರೆ ಕುತೂಹಲಕಾರಿಯಾಗಿರುವ ಘಟನೆಯೊಂದು ಇಟಲಿಯ ಇಟಲಿಯ ಪಾಂಪೆ ನಗರದಲ್ಲಿ ನಡೆದಿದೆ. ಇದು ಪುರಾತತ್ತ್ವ ಶಾಸ್ತ್ರದ ತಾಣವಾಗಿದೆ.
ಇಲ್ಲಿ ಸುಮಾರು 2 ಸಾವಿರ ವರ್ಷಗಳ ಹಳೆಯ ಫಾಸ್ಟ್ ಫುಡ್ ಸ್ಟಾಲ್ ರೀತಿಯ ಅಂಗಡಿ ಪತ್ತೆಯಾಗಿದೆ. ಇದು ರೋಮನ್ ಕಾಲದ ಮಳಿಗೆ ಎಂದು ಅಧ್ಯಯನದಿಂದ ತಿಳಿದಿದೆ. ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಮತ್ತು ವಿವಿಧ ರೀತಿಯ ಚಿತ್ರವುಳ್ಳ ಮಳಿಗೆ ಇದಾಗಿದೆ.
ಕುತೂಹಲದ ಸಂಗತಿ ಎಂದರೆ ಇದು ಸಿಕ್ಕಿದ್ದು ಜ್ವಾಲಾಮುಖಿಯ ಬೂದಿಯಲ್ಲಿ! ಕ್ರಿಸ್ತಶಕ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಿಸಿದ ಜ್ವಾಲಾಮುಖಿಯ ಬೂದಿಯಲ್ಲಿ ಹೂತುಹೋಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನು ಕಳೆದ ವರ್ಷವೇ ಕಂಡುಹಿಡಿಯಲಾಗಿತ್ತು. ಆದರೆ ಇದನ್ನು ಭಾಗಶಃ ಹೊರತೆಗೆಯಲಾಗಿತ್ತು. ಆದರೆ ಇದು ಏನೆಂದು ತಿಳಿದುಬಂದಿರಲಿಲ್ಲ. ಆದರೆ ಇದೀಗ ಸಂಪೂರ್ಣ ಅಧ್ಯಯನದ ನಂತರ ಈಗ ಇದು ಫಾಸ್ಟ್ಫುಡ್ ಮಳಿಗೆ ಎಂದು ತಿಳಿದುಬಂದಿದೆ.
ಇದರ ಮೇಲೆ ವಿವಿಧ ರೀತಿಯ ಪೇಂಟಿಂಗ್ಸ್ನಿಂದ ಅಲಂಕಾರ ಮಾಡಿದ ಬಾರ್ಕೌಂಟರ್ ಇದಾಗಿದೆ. ಸ್ಥಳದಲ್ಲಿ ಬಾತುಕೋಳಿ ಮೂಳೆಯ ಚೂರು, ಮಣ್ಣಿನ ಮಡಿಕೆ, ಮೇಕೆ ಹಾಗೂ ಮೀನಿನ ಅವಶೇಷಗಳು ಪತ್ತೆಯಾಗಿವೆ. ಅಲ್ಲದೆ ಸ್ಟಾಲ್ ಗೋಡೆಗಳ ಮೇಲೆ ಕೋಳಿ ಹಾಗೂ ಬಾತುಕೋಳಿ ಚಿತ್ರಗಳನ್ನು ಬಿಡಸಲಾಗಿದೆ.