ಕೋಝಿಕ್ಕೋಡ್: ಕೋಝಿಕ್ಕೋಡ್ ನ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ಕೋವಿಡ್ ವಾರಿಯರ್ 2020 ರ ರಾಷ್ಟ್ರೀಯ ಮಾನ್ಯತೆಗೆ ಭಾಜನವಾಗಿದೆ. ಕೋವಿಡ್ ಅವಧಿಯಲ್ಲಿ ಅತ್ಯುತ್ತಮ ಪರಿಚರಣಕ್ಕಾಗಿ ಈ ಪ್ರಶಸ್ತಿ ಹುಡುಕಿಬಂದಿದೆ. ಪ್ರಶಸ್ತಿಯನ್ನು ಕೇಂದ್ರ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಘೋಷಿಸಿದ್ದಾರೆ.
ಪ್ರಮುಖ ಜಾಗತಿಕ ಮಾರುಕಟ್ಟೆಯ ಸಂಶೋಧನಾ ಸಂಸ್ಥೆಯಾದ ಟಾಪ್ ಗಲಾಂಟ್ ಮೀಡಿಯಾ ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ಸೊಸೈಟಿಯಲ್ಲಿ ಹೆಚ್ಚು ನವೀನ ಮತ್ತು ಅನುಕರಣೀಯ ಕಾರ್ಯಗಳ ವಿಭಾಗದಲ್ಲಿ ಕೋಝಿಕ್ಕೋಡ್ ಆಸ್ಟರ್ ಮಿಮ್ಸ್ ಪ್ರಥಮ ಸ್ಥಾನ ಪಡೆದಿದೆ.
ಕೋವಿಡ್ ಸಂದರ್ಭ ಸಾಮಾಜಿಕವಾಗಿ ಸೂಕ್ತವಾದ ಕಾರ್ಯಚಟುವಟಿಕೆಗಳನ್ನು ಮಾಡುವ ಮೂಲಕ ಸೋಂಕು ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿರುವ ದೇಶದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪ್ರಶಸ್ತಿ ಗುರುತಿಸುತ್ತದೆ.
ಕೋವಿಡ್ ವ್ಯಾಪಕವಾಗಿ ಹರಡಿದ ಸಂದರ್ಭ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು, ವೈದ್ಯಕೀಯ ಕಾಲೇಜು ಸೇರಿದಂತೆ ತುರ್ತು ಶಸ್ತ್ರಚಿಕಿತ್ಸೆ, ಅಗತ್ಯವಿರುವವರಿಗೆ ಉಚಿತ ಮತ್ತು ಕಡಿಮೆ ವೆಚ್ಚದ ಶಸ್ತ್ರಚಿಕಿತ್ಸೆಯನ್ನು ಒದಗಿಸಲು ಸರ್ಕಾರದ ಸಹಯೋಗದೊಂದಿಗೆ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಈ ಪ್ರಶಸ್ತಿ ಗುರುತಿಸುತ್ತದೆ.