HEALTH TIPS

2021 ರ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯನ್ನು ನವೀಕರಿಸುವುದು ಮತ್ತು ಹೆಸರನ್ನು ಸೇರಿಸುವುದು ಹೇಗೆ? ಸಮಗ್ರ ಯೋಜನೆಯೊಂದಿಗೆ ಚುನಾವಣಾ ಆಯೋಗ

                

        ತಿರುವನಂತಪುರ: 2021 ರ ವಿಧಾನಸಭಾ ಚುನಾವಣಾ ಮತದಾರರ ಪಟ್ಟಿಯಲ್ಲಿ ಗರಿಷ್ಠ ಜನರನ್ನು ಸೇರಿಸಲು ಚುನಾವಣಾ ಆಯೋಗ ಸಮಗ್ರ ಯೋಜನೆಯನ್ನು ರೂಪಿಸಿದೆ. ಮತದಾರರ ಪಟ್ಟಿಯನ್ನು ನವೀಕರಿಸಲಾಗಿದೆ ಮತ್ತು ಆಕ್ಷೇಪಣೆಗಳು ಮತ್ತು ದೂರುಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿದೆ.

             ಮುಖ್ಯ ಚುನಾವಣಾ ಅಧಿಕಾರಿ ಟೀಕಾರಾಮ್ ಮೀನಾ ಮಾತನಾಡಿ, ಮತದಾರರು ತಮ್ಮ ಹಕ್ಕುಗಳನ್ನು ಅಥವಾ ಆಕ್ಷೇಪಣೆಯನ್ನು ಕರಡು ಪಟ್ಟಿ ಪರಿಶೋಧಿಸಿ ಡಿಸೆಂಬರ್ 31 ರವರೆಗೆ ಸಲ್ಲಿಸಬಹುದು ಎಂದಿರುವರು. ಮತದಾರರ ಪಟ್ಟಿಯನ್ನು ನವೀಕರಿಸಬೇಕೆಂಬ ಬೇಡಿಕೆಯಿಂದಾಗಿ ಚುನಾವಣಾ ಆಯೋಗವು ದಿನಾಂಕವನ್ನು ವಿಸ್ತರಿಸಿದೆ.

           ಪ್ರಸ್ತುತ, ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 2,63,00,000 ಜನರಿದ್ದಾರೆ. ಪಟ್ಟಿಯ ಪರಿಷ್ಕರಣೆಯೊಂದಿಗೆ ಮತದಾರರ ಸಂಖ್ಯೆ 2,69,00,000 ಕ್ಕೆ ಏರಿಕೆಯಾಗುವುದು ಎಂದು ಚುನಾವಣಾ ಆಯೋಗ ಅಂದಾಜಿಸಿದೆ. 2021 ರ ಜನವರಿ 1 ಅಥವಾ ಅದಕ್ಕೂ ಮೊದಲು 18 ಹರೆಯಕ್ಕೆ ಕಾಲಿಡುವವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದು. ಅಸ್ತಿತ್ವದಲ್ಲಿರುವ ಪಟ್ಟಿಯಲ್ಲಿ ಅಗತ್ಯ ಬದಲಾವಣೆಗಳನ್ನು ಕಾನೂನುಬದ್ಧವಾಗಿ ಮಾಡಬಹುದು. ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ 31 ರವರೆಗೆ ಸಮಗ್ರ ಅಭಿಯಾನವನ್ನು ಯಾವುದೇ ವಯಸ್ಕರು ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬಹುದು. ಎಲ್ಲಾ ಅರ್ಹ ಅಭ್ಯರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದನ್ನು ತ್ವರಿತಗೊಳಿಸಲು ಮುಖ್ಯ ಚುನಾವಣಾ ಅಧಿಕಾರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

       18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು, ವಿಭಿನ್ನ ಲಿಂಗಿಗಳು, ವಿಕಲಚೇತನರು ಮತ್ತು ಪ್ರತಿ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಸೇರಿದಂತೆ ಎಲ್ಲಾ ಸಂಬಂಧಿತ ವಿಭಾಗಗಳ ಮೂಲಕ ಸಮಗ್ರ ದಾಖಲಾತಿ ಕಾರ್ಯಕ್ರಮಗಳನ್ನು ಈ ತಿಂಗಳು ಜಾರಿಗೆ ತರಲಾಗುವುದು.

         ವಿಶೇಷ ಪತ್ರಿಕಾ ಪ್ರಕಟಣೆಗಳು, ಪೆÇೀಸ್ಟರ್‍ಗಳು, ಕಿರು ವೀಡಿಯೊಗಳು, ಸರ್ಕಾರಿ ವೆಬ್‍ಸೈಟ್‍ಗಳಲ್ಲಿ ಮತದಾರರ ನೋಂದಣಿ ಲಿಂಕ್‍ಗಳನ್ನು ಸೇರಿಸುವುದು ಮತ್ತು ರೇಡಿಯೋ ಅಭಿಯಾನವನ್ನು ಈ ಅವಧಿಯಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ತಿಳಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries