HEALTH TIPS

2021 ಇನ್ನೂ ಭೀಕರವಾಗಿರುತ್ತೆ! ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ ಭವಿಷ್ಯ!

Top Post Ad

Click to join Samarasasudhi Official Whatsapp Group

Qries

          ಸೋಫಿಯಾ: 2020 ಸಾಕಷ್ಟು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಕರೊನಾ, ನೆರೆ, ದಾಳಿಗಳು, ಲಾಕ್​ಡೌನ್​ ಹೀಗೆ ಸಾಲು ಸಾಲು ಸಮಸ್ಯೆಗಳು ಪೂರ್ತಿ ವರ್ಷವನ್ನೇ ಹಾಳು ಮಾಡಿವೆ. 2021ರಲ್ಲಾದರೂ ನೆಮ್ಮದಿಯ ಜೀವನ ಸಿಗಬಹುದು ಎಂದು ಅನೇಕರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ 2021 ನೀವೆಂದುಕೊಂಡಷ್ಟು ಸುಲಭವಾಗಿರದೆ, ಇನ್ನಷ್ಟು ಭೀಕರವಾಗಿರಲಿದೆ ಎಂದು ಒಬ್ಬರು ಭವಿಷ್ಯ ನುಡಿದಿದ್ದಾರೆ.

             1996ರಲ್ಲಿಯೇ ಮೃತ ಪಟ್ಟಿರುವ ಈ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದಳು. ವಂಗಾ ಹೇಳಿರುವ ಪ್ರಕಾರ 2021 ಭೀಕರವಾಗಿರಲಿದೆ. ಬಹಳಷ್ಟು ದುರಂತಗಳು ಮತ್ತು ದೊಡ್ಡ ಅನಾಹುತಗಳಿಗೆ ಈ ವರ್ಷ ನಾವು ಸಾಕ್ಷಿಯಾಗಲಿದ್ದೇವೆ.

'2021ರಲ್ಲಿ ಜನರ ಪ್ರಜ್ಞೆ ಬದಲಾಗುತ್ತದೆ. ಕಷ್ಟದ ಸಮಯಗಳು ಬರುತ್ತವೆ. ಜನರು ತಮ್ಮ ನಂಬಿಕೆಯಿಂದ ಕಳೆದುಕೊಳ್ಳುತ್ತಾರೆ. ಮಾನವೀಯತೆಯ ಭವಿಷ್ಯ ಮತ್ತು ಹಣೆಬರಹವನ್ನು ಬದಲಿಸುವ ವಿನಾಶಕಾರಿ ಘಟನೆಗಳಿಗೆ ಮನುಷ್ಯ ಸಾಕ್ಷಿಯಾಗಲಿದ್ದಾನೆ'ಎಂದು ಅವರು ಹೇಳಿದ್ದರು.

ಈ ವರ್ಷದಲ್ಲಿ ಡ್ರ್ಯಾಗನ್​ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಬಲವಾದ ಡ್ರ್ಯಾಗನ್ ಮಾನವೀಯತೆಯನ್ನು ವಶಪಡಿಸಿಕೊಳ್ಳುತ್ತದೆ. ಮೂವರು ದೈತ್ಯರು ಒಂದಾಗುತ್ತಾರೆ. ಕೆಲವು ಜನರಲ್ಲಿ ಕೆಂಪು ಹಣ ಇರುತ್ತದೆ ಎಂದು ಅವರು ವಿಲಕ್ಷಣ ಹೇಳಿಕೆ ನೀಡಿದ್ದರು.

             ಈ ವರ್ಷದಲ್ಲಿ ಒಂದು ಉತ್ತಮ ಅಭಿವೃದ್ಧಿಯೂ ಆಗಲಿದೆ. ಮಹಾಮಾರಿ ಕ್ಯಾನ್ಸರ್​ಗೆ ಔಷಧ ಸಿಗಲಿದೆ. ಕ್ಯಾನ್ಸರ್​ನ್ನು ಜನರು ಕಬ್ಬಿಣದ ಸರಳಿನಲ್ಲಿ ಕಟ್ಟಿ ಹಾಕಲಿದ್ದಾರೆ ಎಂದು ವಾಂಗಾ ತಿಳಿಸಿದ್ದರು.

                              ಯಾರೀ ಬಾಬಾ ವಂಗಾ? 
      ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ, 1996ರಲ್ಲಿಯೇ ಮೃತಪಟ್ಟಿದ್ದರು. ಸ್ತನ ಕ್ಯಾನ್ಸರ್‌ಗೆ ಬಲಿಯಾದ ಅವರಿಗೆ ಬಾಲ್ಯದಿಂದಲೂ ಕಣ್ಣುಗಳೂ ಕಾಣಿಸುತ್ತಿರಲಿಲ್ಲ. ಆದರೆ ಜಗತ್ತಿನಲ್ಲಿ 51ನೇ ಶತಮನಾದವರೆಗೂ ಏನೇನು ಸಂಭವಿಸಲಿದೆ ಎನ್ನುವುದನ್ನು ಕಂಡುಕೊಂಡಿದ್ದರಂತೆ. 5079ನೇ ಇಸವಿಯವರೆಗೆ ಜಗತ್ತಿನಲ್ಲಿ ಏನೇನು ಸಂಭವಿಸಲಿದೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾರೆ. ಅವರ ನಂಬಿಕೆ ಪ್ರಕಾರ 5079ಕ್ಕೆ ಜಗತ್ತಿನ ಅಂತ್ಯವಾಗಲಿದೆ.

         2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. 'ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ' ಎಂದು ಆಕೆ 1989ರಲ್ಲಿ ನುಡಿದಿದ್ದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries