HEALTH TIPS

ನಾಳೆ ಅಂತಿಮ ಹಂತದ ಮತದಾನ; ಭದ್ರತೆ ಒದಗಿಸಲು 20,603 ಪೋಲೀಸ್ ಸಿಬ್ಬಂದಿಗಳ ನಿಯೋಜನೆ

                    

         ತಿರುವನಂತಪುರ: ಅಂತಿಮ ಹಂತದ ಮತದಾನ ನಾಳೆ ನಡೆಯುತ್ತಿರುವ ಜಿಲ್ಲೆಗಳಲ್ಲಿ 2911 ಬೂತ್‍ಗಳಲ್ಲಿ ವಿಶೇಷ ಕಣ್ಗಾವಲು ಮತ್ತು ಗಸ್ತು ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

    ಕೊನೆಯ ಹಂತದ ಚುನಾವಣೆಗಳಲ್ಲಿ ಭದ್ರತೆ ಒದಗಿಸಲು ಒಟ್ಟು 20,603 ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 56 ಡಿವೈಎಸ್‍ಪಿಗಳು, 232 ಇನ್ಸ್‍ಪೆಕ್ಟರ್‍ಗಳು, 1172 ಎಸ್‍ಐಗಳು / ಎಎಸ್‍ಐಗಳು ಮತ್ತು ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಮತ್ತು ಸಿವಿಲ್ ಪೆÇಲೀಸ್ ಅಧಿಕಾರಿ ಹುದ್ದೆಯಲ್ಲಿ 19,143 ಅಧಿಕಾರಿಗಳು ಒಳಗೊಂಡಿದ್ದಾರೆ. 

     ಇದಲ್ಲದೆ, 616 ಗೃಹರಕ್ಷಕರು ಮತ್ತು 4325 ವಿಶೇಷ ಪೋಲೀಸ್ ಅಧಿಕಾರಿಗಳನ್ನು ಈ ಬಾರಿ ನಿಯೋಜಿಸಲಾಗಿದೆ.

     ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪೋಲೀಸ್ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು 590 ಗುಂಪು ಗಸ್ತು ತಂಡ ಮತ್ತು 250 ಕಾನೂನು ಜಾರಿ ಗಸ್ತು ತಂಡಗಳನ್ನು ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ 498 ಪಿಕೆಟ್ ಪೆÇೀಸ್ಟ್‍ಗಳು ಇರಲಿವೆ. ರಾಜ್ಯ ಪೆÇಲೀಸ್ ಮುಖ್ಯಸ್ಥ, ಕಾನೂನು ಜಾರಿ ವಿಭಾಗದ ಎಡಿಜಿಪಿ ಮತ್ತು ವಲಯ ಐಜಿಯ ನಿಯಂತ್ರಣದಲ್ಲಿ, 30 ಪ್ಲಾಟೂನ್ ಪೆÇಲೀಸರನ್ನು ವಿಶೇಷವಾಗಿ ಮೂರನೇ ಹಂತದ ಚುನಾವಣೆಯಲ್ಲಿ ನಿಯೋಜಿಸಲಾಗಿದೆ.

    ಇದಲ್ಲದೆ, ಕಣ್ಣೂರು ಡಿಐಜಿಗೆ ನಾಲ್ಕು ಬೆಟಾಲಿಯನ್ ಮತ್ತು ನಾಲ್ಕು ಜಿಲ್ಲೆಗಳ ಎಲ್ಲಾ ಎಸ್ಪಿಗಳಿಗೆ ತಲಾ ಒಂದು ಬೆಟಾಲಿಯನ್ ಪೋಲೀಸರ ವಿಶೇಷ ತಂಡ ಒದಗಿಸಲಾಗಿದೆ.    

      ಅತಿ ಸೂಕ್ಷ್ಮವೆಂದು ಪರಿಗಣಿಸಲಾಗಿರುವ 2911 ಬೂತ್‍ಗಳಲ್ಲಿ ವಿಶೇಷ ಕಣ್ಗಾವಲು ಮತ್ತು ಗಸ್ತು ಏರ್ಪಡಿಸಲಾಗಿದೆ  ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries