ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲು ಕೊನೆಯ ದಿನಾಂಕ ನಾಳೆಗೆ ಕೊನೆಗೊಳ್ಳಲಿದೆ. ಹೊಸ ಪಟ್ಟಿಯನ್ನು ಜನವರಿ 20 ರಂದು www.ceo.kerala.gov.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಪ್ರತ್ಯೇಕ ಮತದಾರರ ಪಟ್ಟಿ ಇದೆ. ನಾಳೆಯ ನಂತರ, ಅರ್ಜಿದಾರರ ಹೆಸರನ್ನು ಚುನಾವಣೆಗೆ ಸ್ವಲ್ಪ ಮೊದಲು ಪ್ರಕಟಿಸಬೇಕಾದ ಪೂರಕ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ.
ರಾಜಕೀಯದವರನ್ನು ನಂಬಬೇಡಿ:
ಇತ್ತೀಚೆಗೆ ಕೇಳಿಬರುವ ಸಮಸ್ಯೆಯೆಂದರೆ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ನಂಬುವಾಗಲೂ ಕೊನೆಯ ಕ್ಷಣದಲ್ಲಿ ಇಲ್ಲವೆಂದು ಕಂಡುಬರುವುದಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ಜಾಗರೂಕರಾಗಿದ್ದು,ಅವರವರೇ ಈ ಬಗ್ಗೆ ಕಾಳಜಿ ವಹಿಸುವುದು ಉತ್ತಮ.ಆಯಾ ರಾಜಕೀಯ ಪಕ್ಷಗಳು ಅವರವರ ಪಕ್ಷಕ್ಕೆ ಮತ ನೀಡುವವರನ್ನು,ಅಥವಾ ಖಾತ್ರಿ ಇರುವವರನ್ನಷ್ಟೇ ಮತದಾರರ ಪಟ್ಟಿಗೆ ಸೇರಿಸುವುದು ರೂಢಿ.ಆದರೆ ನೀವು ಯಾವುದೇ ಪಕ್ಷದಿಂದ ಅಧಿಕ್ರತರಾಗಿ ಗುರುತಿಸಲ್ಪಡದವರಾಗಿದ್ದರೆ ನಿಮ್ಮನ್ನು ಈ ಬಗ್ಗೆ ಯಾರೂ ಗಮನಿಸರು.ಆದ್ದರಿಂದ ನಿಮ್ಮ ವ್ಯಾಪ್ತಿಯ ಬಿಎಲ್ಒ ಅವರನ್ನು ಹೇಗಾದರೂ ಭೇಟಿಯಾಗಿ ಈ ಬಗ್ಗೆ ವಿಚಾರಿಸಿ ಮತದಾರ ಪಟ್ಟಿ ಪರಿಶೀಲಿಸಿ ಅಗತ್ಯ ಕ್ರಮ ಕ್ಯೆಗೊಳ್ಳುವುದು ವಿಹಿತವಾದುದು.