ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸದಸ್ಯರ ಪದಗ್ರಹಣ ಡಿ.21ರಂದು ಆಯಾ ಸಂಸ್ಥೆಗಳಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಗ್ರಾಮ, ಬ್ಲೋಕ್, ಜಿಲ್ಲಾ ಪಂಚಾಯತ್ ಗಳಲ್ಲಿ ಮೊದಲ ಸದಸ್ಯರು ಚುನಾವಣೆ ಅಧಿಕಾರಿಗಳ ಮುಂದೆ ಪದಗ್ರಹಣ ನಡೆಸುವರು. ಗ್ರಾಮ ಪಂಚಾಯತ್ ಗಳಲ್ಲಿ ಡೆಪ್ಯೂಟಿ ಡೈರೆಕ್ಟರ್ ಗಳು, ಬ್ಲೋಕ್ ಪಂಚಾಯತ್ ಗಳಲ್ಲಿ ಸಹಾಯಕ ಅಭಿವೃದ್ಧಿ ಕಮೀಷನರ್ ಗಳು, ನಗರಸಭೆಗಳಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೇಗಳ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾಧಿಕಾರಿ ಅಗತ್ಯದ ವ್ಯವಸ್ಥೆಗಳನ್ನು ಸಿದ್ಧಪಡಿಸಲಿದ್ದಾರೆ. ಪದಗ್ರಹಣ ನಡೆದ ತಕ್ಷಣ ಆಯ್ಕೆಗೊಂಡ ಸದಸ್ಯರ ಮೊದಲ ಸಭೆ ಮೊದಲು ಪದಗ್ರಹಣ ನಡೆಸಿರುವ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ನಗರಸಭೆಗಳಲ್ಲಿ ಪದಗ್ರಹಣ ನಡೆಸಲು ನೇಮಕಗೊಂಡಿರುವ ಚುನಾವಣೆ ಅಧಿಕಾರಿಗಳು:
ಕಾಸರಗೋಡು: ಪ್ರಬಂಧಕ(ಡಿ.ಪಿ.) ಜಿಲ್ಲಾ ಉದ್ದಿಮೆ ಕೇಂದ್ರ, ಕಾಸರಗೋಡು.
ಕಾಞಂಗಾಡು: ಯೋಜನೆ ನಿರ್ದೇಶಕ, ಬಡತನ ನಿವಾರಣೆ ಘಟಕ, ಕಾಸರಗೋಡು.
ನೀಲೇಶ್ವರ: ಕೃಷಿ ಸಹಾಯಕ ನಿರ್ದೇಶಕ (ವೈ.ಪಿ.) ಕಾಸರಗೋಡು.
28 ಮತ್ತು 30ರಂದು ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆ
ಡಿ.21ರಂದು ಪದಗ್ಗರಹಣ ನಡೆಸಿ ಅಧಿಕಾರಕ್ಕೇರುವ ನಗರಸಭೆಗಳ ಅಧ್ಯಕ್ಷರ ಚುನಾವಣೆ ಡಿ.28ರಂದು ಬೆಳಗ್ಗೆ 11 ಗಂಟೆಗೆ, ಉಪಾಧ್ಯಕ್ಷರ ಚುನಾವಣೆ ಮಧ್ಯಾಹ್ನ 2 ಗಂಟೆಗೆ ನಡೆಯಲಿವೆ. ತ್ರಿಸ್ತರ ಪಂಚಾಯತ್ ಗಳ ಅಧ್ಯಕ್ಷರ ಆಯ್ಕೆ ಡಿ.30ರಂದು ಬೆಳಗ್ಗೆ 11 ಗಂಟೆಗೆ, ಉಪಧಯಕ್ಷರ ಆಯ್ಕೆ ಮಧ್ಯಾಹ್ನ 2 ಗಂಟೆಗೆ ಜರುಗಲಿವೆ. ಈ ಆಯ್ಕೆಗಳನ್ನು ಆಯಾ ಚುನಾವಣೆ ಅಧಿಕಾರಿಗಳು ನಡೆಸುವರು.