ಪತ್ತನಂತಿಟ್ಟು: ದೇಶದಲ್ಲೇ ಅತಿ ಕಿರಿಯ ಮೇಯರ್ ಆಗಿ ತಿರುವನಂತಪುರದ ಆರ್ಯ ರಾಜೇಂದ್ರನ್ ಆಯ್ಕೆಯಾದ ಬೆನ್ನಿಗೇ ಕಿರಿಯ ಪಂಚಾಯತ್ ಅಧ್ಯಕ್ಷರು ಸಹ ಸಿಪಿಎಂನಿಂದ ಇದೀಗ ಆಯ್ಕೆಯಾಗಿ ಕುತೂಹಲ ಮೂಡಿಸಿದ್ದಾರೆ. 21 ವರ್ಷದ ರೇಷ್ಮಾ ಮರಿಯಮ್ ರಾಯ್ ಅವರು ಪತ್ತನಂತಿಟ್ಟುಯ ಜಿಲ್ಲೆಯ ಅರುವಾಪುಲಂ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅರುವಾಪುರಂ ಪಂಚಾಯತ್‍ನ 11 ನೇ ವಾರ್ಡ್‍ನಲ್ಲಿ ರೇಷ್ಮಾ ಎಡ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ರೇಷ್ಮಾ ಸುದ್ದಿಯಲ್ಲಿದ್ದರು. ನಾಮಪತ್ರ ಸಲ್ಲಿಸಲು ಕೊನೆಯ ದಿನಕ್ಕೆ ಕೆಲವೇ ದಿನಗಳ ಮೊದಲು ರೇಷ್ಮಾ 21 ವರ್ಷ ತುಂಬಿದರು. ಇದರ ಬೆನ್ನಲ್ಲೇ ನಾಮಪತ್ರ ಸಲ್ಲಿಸಲಾಯಿತು. ಅವರು ಚುನಾವಣೆಯಲ್ಲಿ ಗೆದ್ದರು.
ಯುಡಿಎಫ್ ಸಿಟ್ಟಿಂಗ್ ಸ್ಥಾನವಾದ ವಾರ್ಡ್ ನ್ನು ಬಹುಮತದ 70 ಮತಗಳಿಂದ ರೇಷ್ಮಾ ಗೆದ್ದಿದ್ದರು. 2020 ರ ನವೆಂಬರ್ 18 ರಂದು ರೇಷ್ಮಾ ಅವರಿಗೆ 21 ವರ್ಷ ತುಂಬಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 19. ರೇಷ್ಮಾ ಅವರು 21 ವರ್ಷ ತುಂಬಿದ ಮರುದಿನವೇ ಅರ್ಜಿ ಸಲ್ಲಿಸಿದರು.
ರೇಷ್ಮಾ ಕೊನ್ನಿ ವಿಎನ್‍ಎಸ್ ಕಾಲೇಜಿನಲ್ಲಿ ಎಸ್‍ಎಫ್‍ಐ ಸದಸ್ಯರಾಗಿದ್ದರು. ರೇಷ್ಮಾ ಪ್ರಸ್ತುತ ಎಸ್‍ಎಫ್‍ಐ ಜಿಲ್ಲಾ ಸಚಿವಾಲಯದ ಸದಸ್ಯೆ ಮತ್ತು ಡಿವೈಎಫ್‍ಐ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದಾರೆ.