ತಿರುವನಂತಪುರ: ರಾಜ್ಯ ಪೋಲೀಸ್ ವರಿಷ್ಠರ ವಿನೂತನ ಯೋಜನೆಯಾದ ಪೋಲೀಸರಿಗಾಗಿರುವ ಆನ್ ಲೈನ್ ಅದಾಲತ್ ನ ಮುಂದಿನ ಕಾರ್ಯಕ್ರಮ(ಎರಡನೇ)ಡಿ.24 ರಂದು ಆಯೋಜನೆಗೊಂಡಿದೆ. ಈ ವೇಳೆ ಆಲಪ್ಪುಳ ಮತ್ತು ಕಾಸರಗೋಡು ಜಿಲ್ಲೆಗಳ ದೂರುಗಳನ್ನು ಪರಿಗಣಿಸಲಾಗುವುದು ಎಂದು ತಿಳಿದುಬಂದಿದೆ. ದೂರುಗಳು ಡಿಸೆಂಬರ್ 22 ರ ಮೊದಲು ಎಂಬ ವಿಳಾಸಕ್ಕೆ ಕಳಿಸಬಹುದು. ಫೆÇೀನ್ 9497900243 ಸಂಖ್ಯೆಗೂ ಸಂಪರ್ಕಿಸಬಹುದು..
ಪ್ರಸ್ತುತ ಸೇವೆಯಲ್ಲಿರುವ ಮತ್ತು ನಿವೃತ್ತ ಪೆÇಲೀಸ್ ಅಧಿಕಾರಿಗಳ ಕುಂದುಕೊರತೆಗಳಿಗೆ ಸಂಬಂಧಿಸಿದ ಮತ್ತು ವೈಯಕ್ತಿಕ ದೂರುಗಳನ್ನು ಅದಾಲತ್ ಪರಿಗಣಿಸುತ್ತದೆ. ಇವುಗಳನ್ನು ರಾಜ್ಯ ಪೆÇಲೀಸ್ ಮುಖ್ಯಸ್ಥರ ಗಮನಕ್ಕೆ ತರುವ ಮೂಲಕ ನೇರವಾಗಿ ಪರಿಹರಿಸಬಹುದು.
ಇದರ ವಿಶೇಷತೆಯೆಂದರೆ ಪೆÇಲೀಸ್ ಅಧಿಕಾರಿಗಳು ನೇರವಾಗಿ ದೂರು ನೀಡಬಹುದು. ಅಂದರೆ ಉನ್ನತ ಅಧಿಕಾರಿಗಳ ಮೂಲಕ ಕೊಡಬೇಕೆಂಬುದಿಲ್ಲ. ಪೋಲೀಸ್ ಅಧಿಕಾರಿಯ ಜೀವನ ಸಂಗಾತಿ ಕೂಡ ದೂರು ನೀಡಬಹುದು. ಎರಡು ಪೋಲೀಸ್ ಜಿಲ್ಲೆಗಳ ದೂರುಗಳನ್ನು ಪ್ರತಿ ವಾರ ಆನ್‍ಲೈನ್‍ನಲ್ಲಿ ಪರಿಗಣಿಸಲಾಗುತ್ತದೆ.